ಬೆಳಗಾವಿ ಜಿಲ್ಲೆಯ ಸಾವಿರಾರು ಪ್ರಕರಣಗಳು ಇತ್ಯರ್ಥ..

ಬೆಳಗಾವಿ-ರಾಷ್ಡ್ರೀಯ ಲೋಕ ಅದಾಲತ್ ಅಂಗವಾಗಿ ಬೆಳಗಾವಿ ಜಿಲ್ಲೆಯ 81 ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸಾವಿರಾರು ಪ್ರಕರಣಗಳು ಒಂದೇ ದಿನ ಇತ್ಯರ್ಥ ವಾಗಿವೆ.

ಬೆಳಗಾವಿ ಜಿಲ್ಲೆಯಾದ್ಯಂತ 81 ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಅದಾಲತ್‌ಗೆ ಕಕ್ಷಿದಾರರು ಮತ್ತು ನ್ಯಾಯವಾದಿಗಳಿಂದ ಉತ್ತಮ ಸಹಕಾರ ದೊರೆತಿದ್ದು, ಒಂದೇ ದಿನದಲ್ಲಿ 12514 ವಿವಿಧ ಕೇಸ್‌ಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ಜೋಶಿ ಅವರು ತಿಳಿಸಿದ್ದಾರೆ.
ಶನಿವಾರ ಸಂಜೆ ಪತ್ರಿಕಾ ಪ್ರಕಟಣೆಯ ಮೂಲಕ ವಿಷಯ ತಿಳಿಸಿರುವ ಅವರು, ಇಡೀ ಜಿಲ್ಲೆಯ 81 ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವರ್ಗದವರು ಒಂದು ತಂಡವಾಗಿ ಕೆಲಸ ಮಾಡಿರುವುದರಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶ್ರಮ ಸಾರ್ಥಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಾದ್ಯಂತ ಒಟ್ಟು 31520 ಪ್ರಕರಣಗಳನ್ನು ಲೋಕ ಅದಾಲತ್ ಮುಂದೆ ತೆಗೆದುಕೊಳ್ಳಲಾಗಿತ್ತು. ಶನಿವಾರ ಸಂಜೆಯವರೆಗೆ 12514 ಪ್ರಕರಣಗಳನ್ನು ವಿಲೇವಾರಿ ಮಾಡುವುದರ ಜತೆಗೆ ವಿವಿಧ ಪ್ರಕರಣಗಳಲ್ಲಿ 50.11ಕೋಟಿ ರೂ.ಪರಿಹಾರ(ಸೆಟ್ಲ್‌ಮೆಂಟ್) ಮೊತ್ತದ ತೀರ್ಪು ನೀಡಲಾಗಿದೆ ಎಂದು ನ್ಯಾಯಾಧೀಶ ಜೋಶಿ ಅವರು ತಿಳಿಸಿದ್ದಾರೆ.

,ಜಿಲ್ಲೆಯ ವಕೀಲರು, ನಮ್ಮ ನ್ಯಾಯಾಧೀಶರು ಕಳೆದ ಒಂದು ತಿಂಗಳಿನಿಂದ ನಿತ್ಯದ ಕೋರ್ಟ್ ಕಲಾಪಗಳ ಜತೆಗೆ ಲೋಕ ಅದಾಲತ್ ಪ್ರಕರಣಗಳ ಅಧ್ಯಯನ ಹಾಗೂ ಜಾಗೃತಿ ಮೂಡಿಸುವುದರ ಬಗ್ಗೆ ಹಗಲಿರಳು ಶ್ರಮಿಸಿದ್ದಾರೆ.
ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ವಿಲೇವಾರಿ ಮಾಡುವುದರಿಂದ ಕಕ್ಷಿದಾರರು ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪಲಿದೆ ಜತೆಗೆ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಲಿದೆ. ಜನನ ಪ್ರಮಾಣಪತ್ರದ ವಿಷಯದಲ್ಲಿ ಗೊಂದಲ, ಚೆಕ್‌ಬೌನ್ಸ್, ಕೌಟುಂಬಿಕ. ಪಾಸ್‌ಪೋರ್ಟ್ , ಬ್ಯಾಂಕ್ ಕಟಬಾಕಿದಾರರ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *