ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚುಳಕಿ-ಚಿಕ್ಕುಂಬಿ ಮಾರ್ಗ ಮಧ್ಯದ ಸೇತುವೆ ತಗ್ಗಿನಲ್ಲಿ ಸರ್ಕಾರಿ ಬಸ್ ಸಿಲುಕಿಕೊಂಡು, 8 ಪ್ರಯಾಣಿಕರು ಅದೃಷ್ಟವಷಾತ್ ಪಾರಾಗಿದ್ದಾರೆ
ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸೇತುವೆ ಪಕ್ಕದ ತೆಗ್ಗಿನಲ್ಲಿ ಇಳಿದ ಬಸ್
ದೊಡ್ಡ ಅನಾಹುತದಿಂದ ಪಾರಾಗಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯ ನರಗುಂದಕ್ಕೆ ತೆರಳಿದ್ದ ಬಸ್ ಸಂಜೆ ಸವದತ್ತಿಗೆ ಮರಳುವಾಗ ಧಾರಾಕಾರ ಮಳೆ ಸುರಿದಿದೆ. ಅಪಾರ ಪ್ರಮಾಣದ ನೀರು ಸೇತುವೆ ಮೇಲೆ ಹರಿದು ಬಂದಿದೆ. ಈ ವೇಳೆ, ಬಸ್ ತಗ್ಗಿನಲ್ಲಿ ಸಿಲುಕಿಕೊಂಡಿದೆ. ಬಸ್ ಬೀಳುವ ಅಪಾಯ ಎದುರಾಗದ್ದು, ಸೇತುವೆ ಪಕ್ಕದಲ್ಲೇ ನಿಂತಿದ್ದ ಜನ, ಬಸ್.ನಲ್ಲಿ ಸಂಚರಿಸುತ್ತಿದ್ದ 8 ಜನರನ್ನು ಕೆಳಗಿಳಿಸಿ ನೀರಿನಿಂದ ಪಾರು ಮಾಡಿದ್ದಾರೆ.
.ಬಳಿಕ ಜೆಸಿಬಿ ಯಂತ್ರದ ಸಹಾಯದೊಂದಿಗೆ ಮೂಲಕ ಬಸ್ಸನ್ನು ಮೇಲೆತ್ತಿ, ಸೇತುವೆಯಿಂದ ರಕ್ಷಣೆ ಮಾಡಿದ್ದಾರೆ.. ಸವದತ್ತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಟನೆ ನಡೆದಿದೆ…
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ