Breaking News

ಕೈ….ಕೊಟ್ಟ ಎಸ್ ಆರ್ ಪಿ…….ಮಿಲಾಪಿ ಕುಸ್ತಿಗೆ ಬಂತೂ ಟಿ ಆರ್ ಪಿ

ಬೆಳಗಾವಿ- ಮಂತ್ರಿ ಯಾರಾಗ್ತಾರೆ? ಪ್ರಮಾಣ ವಚನ ಎಂದು ? ಡಿಕೆ ಶಿವಕುಮಾರ್ ಅವರಿಗೆ ಯಾವ ಖಾತೆ ? ಏನದು ರೇವಣ್ಣನ ಕ್ಯಾತೆ ? ಹೋಮ್ ಮಿನಿಸ್ಟರ್ ಯಾರಾಗಬಹುದು ? ಎಸ್ ಆರ್ ಪಾಟೀಲ ಸಿದ್ರಾಮಣ್ಣನ ಮಾತು ಕೇಳಿ ರಾಜಿನಾಮೆ ಕೊಟ್ರಾ ? ಇದು ರಾಜ್ಯದ ಜನರಲ್ಲಿ ಸುಳಿದಾಡುತ್ತಿರುವ ಪ್ರಶ್ನೆಗಳು

ರಾಜ್ಯ ವಿಧಾನಸಭೆಯ ಫಲಿತಾಂಶ ಇನ್ನೂ ಸಂಪೂರ್ಣವಾಗಿ ಹೊರ ಬಂದಿರಲಿಲ್ಲ ಕಾಂಗ್ರೆಸ್ ನಾಯಕರು ದೊಡ್ಡ ಗೌಡ್ರ ಮನೆಗೆ ದೌಡಾಯಿಸಿ ಮಿಲಾಪಿ ಕುಸ್ತಿಯ ಕಣಕ್ಕೆ ಇಳಿದ್ರು ಖ್ಯಾತನಾಮ ಪೈಲವಾನರಾಗಿ ಕುಮಾರಸ್ವಾಮಿ ಹೊರಹೊಮ್ಮಿದರು ಮಿಲಾಪಿ ಕುಸ್ತಿ ಸರಿಯಾಗಿ ನಡೆಯಬಹುದು ಡಾವ್ ಪೇಚ್ ನಡೆಯುವದಿಲ್ಲ ಒಬ್ಬ ಪೈಲವಾನ್ ಚಿತ್ತ ಬೀದ್ದು ಇನ್ನೊಬ್ಬ ಪೈಲವಾನ್ ಡಬ್ಬ್ ಬೀಳಬಹುದು ಮಿಲಾಪಿ ಕುಸ್ತಿ ಸರಿಯಾಗಿ ನಡೆಯಬಹುದು ಎಂದು ಎಲ್ಲರ ನೀರೀಕ್ಷೆ ಇತ್ತು ಆದ್ರೆ ಕುಸ್ತಿ ಕಣಕ್ಕೆ ಇಳಿಯುವ ಮೊದಲೇ ಕಾಂಗ್ರೆಸ್ ಜೆಡಿಎಸ್ ಪೈಲವಾನರು ಕಣದಿಂದ ಪಲಾಯನವಾಗುತ್ತಿದ್ದಾರೆ

ಬಾಗಲಕೋಟೆ ಜಿಲ್ಲೆಯ ಹಿರಿಯ ಮುತ್ಸದ್ದಿ ಪೈಲವಾನ್ ಎಸ್ ಆರ್ ಪಾಟೀಲ ರಾಜೀನಾಮೆ ನೀಡಿ ಮಿಲಾಪಿ ಕುಸ್ತಿ ಕಣಕ್ಕೆ ಡೈವೋರ್ಸ ನೀಡಿದ್ದಾರೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಕಪ್ ನಮ್ದೇ ಎಂದು ಲಾಭಿ ನಡೆಸಿದ್ದಾರೆ ಕಮಾಂಡರ್ ಪೈಲವಾನ್ ಕುಮಾರಸ್ವಾಮಿ ಎಲ್ಲ ಪೈಲವಾನ್ ರನ್ನು ಗರಡಿ ಮನೆಯಲ್ಲಿ ಕೂಡಿ ಹಾಕಿ ನೀನು ಚಿತ್ತ ಬೀಳು ಅವನು ಡಬ್ಬ್ ಬೀಳ್ತಾನೆ ಹೊಂದಾಣಿಕೆ ಮಾಡಿಕೊಂಡು ಹೋಗೋಣ ಐದು ವರ್ಷ ಮಿಲಾಪಿ ಕುಸ್ತಿ ಆಡೋಣ ಎಂದು ತಾಕೀತು ಮಾಡಿ,ಮಾಡಿ ಸುಸ್ತಾದರೂ ಕುಸ್ತೀ ನೀವೇ ಆಡಿ ನಾವು ಕಣದಿಂದ ದೂರ ಇರ್ತೀವಿ ಅಂತ ಎಲ್ಲರೂ ಧಮಕಿ ಹಾಕುವದನ್ನು ನೋಡಿ ದೊಡ್ಡ ಗೌಡ್ರು ತೆಲೆ ಮೇಲೆ ಕೈ ಇಟ್ಟು ಯಾವ ಪೈಲವಾನ್ ಗೆ ಕೈ ಕೊಡಬೇಕು ಯಾವ ಪೈಲವಾನ್ ಗೆ ಪಂಚ್ ಹೊಡಿಬೇಕು ,ಯಾವ ಪೈಲವಾನ್ ನ ಕಚ್ಚೀ ಕಳೀಬೇಕು ಎಂದು ಯೋಚನೆ ಮಾಡುತ್ತಿದ್ದಾರೆ

ಕೈ ಪಾರ್ಟಿಯ ಪವರ್ ಸ್ಟಾರ್ ಡಿಕೆ ಶಿವಕುಮಾರ್ ಮಾತ್ರ ಈ ಮಿಲಾಪಿ ಕುಸ್ತೀ ಆಟ ನನ್ನ ಮುಂದೆ ನಡೆಯೋದಿಲ್ಲ ನಾನು ಆಡೋದು WWF ಯಾವಾಗ ಯಾರನ್ನು ಎಲ್ಲಿ ಎತ್ತಿ ಒಗೇಯಬೇಕೋ ಒಗೀತಿನಿ ಅಂತ ಮಿಲಾಪಿ ಕುಸ್ತೀಯನ್ನು ದೂರದಿಂದಲೇ ಗಮನಿಸುತ್ತಿದ್ದಾರೆ

ಮಿಲಾಪಿ ಕುಸ್ತಿಯ ಕೋಚ್ ಸಿದ್ರಾಮಣ್ಣ ನನ್ನ ಗರಡಿಯಲ್ಲಿ ತಯಾರಾದ ಪೈಲವಾನ್ ರಿಗೆ ಮಿಲಾಪಿ ಕಣದಲ್ಲಿ ಮುಖ್ಯ ಖಾತೆ ಕೊಡಬೇಕು ಅಂತ ತಮ್ಮ ಆಟ ಶುರು ಮಾಡಿದ್ದು ಎಸ್ ಆರ್ ಪಿ , ಕಣದಲ್ಲಿ ನಿಮ್ಮ ಟಿ ಆರ್ ಪಿ ಕುಸಿದಿದೆ ನೀವು ರಾಜಿನಾಮೆ ಕೊಡಿ ಎಂದು ಬಾಗಲಕೋಟೆಯ ಎಸ್ ಆರ್ ಪಿ ಯನ್ನು ಬಾಗಲಕೋಟೆಗೆ ಕಳುಹಿಸಿದ್ದಾರೆ

ಮಿಲಾಪಿ ಕುಸ್ತಿಯ ಮ್ಯಾನೇಜರ್ ವೇಣು ಗೋಪಾಲ್ ಮಿಲಾಪಿ ಕುಸ್ತಿ ಡ್ಯಾಮೇಜ್ ಆಗ್ತಿದೆ ಅಂತಾ ಚಿಂತೆ ಮಾಡ್ತಿದ್ದಾರೆ ನನ್ನ ಕೈಯಲ್ಲಿ ಏನೂ ಇಲ್ಲ ದಿಲ್ಲಿಯಲ್ಲಿ ಲಿಸ್ಟ ರೆಡಿ ಆಗುತ್ತೆ ಅದರ ಮೇಲೆ ರಾಹುಲ್ ಸಹಿ ಮಾಡ್ತಾರೆ ಆ ಲಿಸ್ಟ ಮಂಗಳವಾರ ಗರಡಿ ಮನೆಯ ನೋಟೀಸ್ ಬೋರ್ಡಿಗೆ ಹಚ್ತೇನಿ ಅಂತ ಹೇಳಿ ದಿಲ್ಲಿಗೆ ಹೋಗಿದ್ದಾರೆ

ಮಿಲಾಪಿ ಕುಸ್ತಿಯಲ್ಲಿ 34 ಗೂಟದ ಕಾರು ಇವೆ ಜೆಡಿಎಸ್ ಪೈಲವಾನರಿಗೆ 12 ಕಾಂಗ್ರೆಸ್ ಪೈಲವಾನರಿಗೆ 22 ಗೂಟದ ಕಾರುಗಳು ಹಂಚಿಕೆ ಆಗಲಿವೆ ಆದ್ರೆ ಎರಡೂ ಪಾರ್ಟಿಗಳಲ್ಲಿ ಎಲ್ಲರೂ ನನಗೆ ಗೂಟದ ಕಾರು ಬೇಕೆ ಬೇಕು ಎಂದು ಬಗಳೂರಿನಲ್ಲೇ ಗೂಟಾ ಬಡ್ಕೊಂಡು ಕುಳಿತಿದ್ದು ಟೀಂ ಮ್ಯಾನೇಜರ್ ಬೆಂಗಳೂರಿನಿಂದ ಕಾಲ್ಕಿತ್ತು ದಿಲ್ಲಿಗೆ ದೌಡಾಯಿದಿದ್ದಾರೆ

ಮಿಲಾಪಿ ಕುಸ್ತಿಯ ಭವಿಷ್ಯ ಬುಧವಾರ ಗೂಟದ ಕಾರು ಪಡೆದ ಪೈಲವಾನರಿಗೆ ಪರ್ಮಿಟ್ ಕೊಟ್ಟ ಬಳಿಕ ನಿರ್ಧಾರ ಆಗಲಿದೆ ಜೆಡಿಎಸ್ ಮತ್ತು ಕಾಂಗ್ರೆಸ್ ಪೈಲವಾನರು ಒಟ್ಟಾಗಿ ಮಿಲಾಪಿ ಕುಸ್ತಿಯ ಕಣ ರೆಡಿ ಮಾಡಿದ್ದಾರೆ ಆದ್ರೆ ಗೂಟದ ಕಾರಿನಿಂದ ವಂಚಿತರಾದ ಪೈಲವಾನರು ಮಿಲಾಪಿ ಕುಸ್ತಿಯ ಗರಡಿ ಮನೆ ಬಿಟ್ಟು ಚಾಣಕ್ಯನ ಗರಡಿ ಮನೆ ಸೇರಿಕೊಳ್ತಾರೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕಾಂಗ್ರೆಸ್ ಜೆಡಿಎಸ್ ಬಿಟ್ಟು ಬರುವ ಪೈಲವಾನ್ ರಿಗೆ ಸ್ಪೇಶಲ್ ಕೋಚಿಂಗ್ ನೀಡಲು ಪವರ್ ಸ್ಟಾರ್ ಡಿಕೆ ಅವರನ್ನು ರೆಡಿ ಮಾಡಿದ್ದಾರೆ

Check Also

ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ

ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.