ಬೆಳಗಾವಿ-ಗಡಿನಾಡು ಗುಡಿ ಬೆಳಗಾವಿಯಲ್ಲಿ ಈಗ ಅಪ್ಪು ಅಭಿನಯಿಸಿದ ಜೇಮ್ಸ್ ಚಿತ್ರದ ಹವಾ ಜೋರಾಗಿದೆ.ನಿವೃತ್ತ ಯೋಧನೊಬ್ಬ ಸೇನಾ ಸಮವಸ್ತ್ರ ಧರಿಸಿ ಕುಟುಂಬ ಸಮೇತ ಜೇಮ್ಸ್ ಚಿತ್ರ ನೋಡಲು ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಬೆಳಗಾವಿಯ ಚಿತ್ರಾ ಚಿತ್ರಮಂದಿರಕ್ಕೆ ಕುಟುಂಬ ಸಮೇತ ಬಂದ ನಿವೃತ್ತ ಯೋಧ ಜೇಮ್ಸ್ ಚಿತ್ರ ನೋಡಿ ಅಪ್ಪು ಅವರನ್ನು ಸ್ಮರಿಸಿದ್ದಾನೆ.ಕುಂದಾನಗರಿ ಬೆಳಗಾವಿಯಲ್ಲಿ ಜೇಮ್ಸ್ ಮೇನಿಯಾ ಜೋರಾಗಿದ್ದು
ಕೇಕ್ ಕಟ್ ಮಾಡುವ ಮೂಲಕ ನಿವೃತ್ತ ಯೋಧ ವಿನಾಯಕ ಮೇದಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಆಚರಿಸಿದ್ದು ವಿಶೇಷ.ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವಾಸಿ ಆಗಿದ್ದಾರೆ ಈ ಮಿಲಿಟರಿ ಮ್ಯಾನ್.
‘ಅಪ್ಪು ಕೊನೆಯ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ’ಹೀಗಾಗಿ ನಾನು ನಿವೃತ್ತ ಯೋಧನಾಗಿ ಸೇನಾ ಸಮವಸ್ತ್ರದಲ್ಲೇ ಚಿತ್ರ ನೋಡಲು ಬಂದಿದ್ದೇನೆ.
ಅಪ್ಪು ಕೊನೆಯ ಸಿನಿಮಾ ಅಂತಾ ನಮಗೇನು ದುಃಖ ಇಲ್ಲ.ನಮ್ಮ ಎದೆಯಲ್ಲಿ ಎಂದೆಂದಿಗೂ ಅಪ್ಪು ಅಜರಾಮರ,ಇದು ಅಪ್ಪು ಅವರ ಕೊನೆಯ ಚಿತ್ರ ಅಂತಾ ಯಾರು ಹೇಳಬೇಡಿ ದಯವಿಟ್ಟು,ಎಂದುನಿವೃತ್ತ ಯೋಧ ವಿನಾಯಕ ಮೇದಾರ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ