ಬೆಳಗಾವಿ-
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸ ಯೋಜನೆಗಳು, ಕಾರ್ಯ ಚಟುವಟಿಕೆಗಳು , ಮತ್ತು ಹೊಸ ಮಾರ್ಗಗಳು, ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆ, ಸಂಸ್ಥೆಯ ವತಿಯಿಂದ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸೌಲಭ್ಯಗಳು ವಿದ್ಯಾರ್ಥಿ ಪಾಸುಗಳು, ಮತ್ತು ವಿವಿಧ ಮಾದರಿಯ ರಿಯಾಯಿತಿ ಪಾಸುಗಳು, ಪ್ರಾಸಂಗಿಕ ಕರಾರಿನ ಮೇಲೆ ಬಸ್ಸುಗಳನ್ನು ಪಡೆಯುವದು, ಸಾರ್ವಜನಿಕರ ಕುಂದುಕೊರತೆಗಳು, ಬಸ್ ನಿಲ್ದಾಣಗಳ ಸಂಪರ್ಕ ದೂರವಾಣಿ ಸಂಖ್ಯೆಗಳು, ಸಂಸ್ಥೆಯ ವ್ಯಾಪ್ತ್ತಿಯಲ್ಲಿ ಖಾಲಿ ಇರುವ ವಾಣಿಜ್ಯ ಮಳಿಗೆಗಳಿಗೆ ಸಂಬಂಧಪಟ್ಟ ಮಾಹಿತಿ ಮತ್ತು ಟೆಂಡರ್ ಪ್ರಕಟಣೆಗಳು, ಹಾಗೂ ಇನ್ನಿತರೆ ಯಾವುದೇ ಮಾಹಿತಿಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಸಾರ್ವಜನಿಕರು ಸಂಸ್ಥೆಯ ಅಧೀಕೃತ ವೆಬ್‌ಸೈಟ್ https://nwkrtc.karnataka.gov.in/ ನ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹಾಗೂ ಸಾರ್ವಜನಿಕರಿಗೆ ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಲು ಸಂಸ್ಥೆಯ ವತಿಯಿಂದ ಪ್ರಾರಂಭಿಸಲಾಗಿರುವ ಸಾಮಾಜಿಕ ಜಾಲತಾಣಗಳಾದ ಟ್ವೀಟರ್ https://twitter.com/nwkrtc ಫೇಸಬುಕ್ https://www.facebook.com/nwkrtc ಮತ್ತು ಇನ್ಸ್ಟಾಗ್ರಾಮ್ www.instagram.com/nw_krtc ಲಿಂಕ್‌ಗಳನ್ನು ಬಳಸುವದರ ಮೂಲಕ ಸಂಸ್ಥೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಮತ್ತು ದೂರದ ಮಾರ್ಗಗಳಿಗೆ ಪ್ರಯಾಣಿಸುವ ಪ್ರಯಾಣಿಕರು ತಾವು ಇರುವ ಸ್ಥಳದಲ್ಲಿಯೇ ksrtc mobile app ಅಥವಾ www.ksrtc.in ವೆಬ್‌ಸೈಟ ಬಳಸುವದರ ಮೂಲಕ ಮುಂಗಡವಾಗಿ ತಮ್ಮ ಪ್ರಯಾಣದ ಟಿಕೇಟುಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯ ಮಾಹಿತಿ ತಂತ್ರಜ್ನಾನ ಇಲಾಖೆಯ ಮುಖ್ಯಸ್ಥರಾದ ಹೆಚ್. ರಾಮನಗೌಡರ್,ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Check Also
ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..
ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …