Breaking News

ಸಂಜೆ, ಸಂಗೀತದಲ್ಲಿ ರಂಗೇರಿದ ಸ್ವರಲೋಕ….

ಡಿಕೆ ಮೋಟಿವ್ ಆಶ್ರಯದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ರಂಗಬರಸೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಅಭಯ್ ಪಾಟೀಲ..!

ಬೆಳಗಾವಿ: ಹಿರಿಯ ಪತ್ರಕರ್ತ ದಿಲೀಪ್ ಕುರುಂದವಾಡೆ ನೇತೃತ್ವದಲ್ಲಿ ಮುನ್ನೆಡೆಯುತ್ತಿರುವ ಡಿಕೆ ಮೋಟಿವ್ ಆಶ್ರಯದಲ್ಲಿ ಹೋಳಿ ಹಬ್ಬದ ಪ್ರಯುಕ್ತ ರಂಗಬರಸೆ ಕಾರ್ಯಕ್ರಮವನ್ನು ಬಲೂನ ಹಾರಿಸುವ ಮೂಲಕ ಶಾಸಕರಾದ ಅಭಯ್ ಪಾಟೀಲ, ಅನಿಲ ಬೆನಕ ಹಾಗೂ‌ ಡಿಸಿ ಎಂ.ಜಿ.ಹಿರೇಮಠ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ‌ಕಾರ್ಯಕ್ರಮದಲ್ಲಿ ಉದ್ಘಾಸಿ ಮಾತನಾಡಿದ ಶಾಸಕ ಅಭಯ್ ಪಾಟೀಲ, ಹೋಳಿ ಹಬ್ಬ ಮುಗಿದ್ಮೇಲೆ ಉತ್ತರ ಭಾರತದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತವೆ.ಆದ್ರೆ, ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ದಿಲೀಪ್ ಕುರುಂದವಾಡೆ ನೇತೃತ್ವದಲ್ಲಿ ರಂಗಬರಸೆ ಕಾರ್ಯಕ್ರಮ ನಡೆಯುತ್ತರೋದು ಒಳ್ಳೆಯ ಬೆಳವಣಿಗೆ. ದಿನನಿತ್ಯದ ಕೆಲಸದ ಒತ್ತಡಗಳನ್ನು ಹೋಗಲಾಡಿಸಲು ಮುಂಬರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಶುಭಹಾರೈಸಿದರು.

ಶಾಸಕರಾದ ಅನಿಲ ಬೆನಕ ಮಾತನಾಡಿ, ಡಿಕೆ ಅಂದ್ರೆನೇ ಧೈರ್ಯ ಮತ್ತು ನಾಲೆಡ್ಜ್. ಬೆಳಗಾವಿಯಲ್ಲಿ ಪತ್ರಕರ್ತ ಸಂಘಟನೆ ಇದೆ ಅನೋದು ಗೋತ್ತು ಆಗಿದ್ದೇ… ದಿಲೀಪ್ ಕುರುಂದವಾಡೆ ಪತ್ರಕರ್ತ ಸಂಘದ ಅಧ್ಯಕ್ಷರಾದ್ಮೇಲೆ.ಇದಕ್ಕೂ ಮುಂಚೆ ಪತ್ರಕರ್ತ ಸಂಘಟನೆ ಇದೆ ಅನೋದ ಗೊತ್ತಿರಲಿಲ್ಲ. ಕೋವಿಡ್ ನೆರೆಹಾವಳಿ ಸಂದರ್ಭದಲ್ಲಿ ದಿಲೀಪ್ ಕುರುಂದವಾಡೆ ಡಿಕೆ‌ ಮೋಟಿವ್ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.ದಿಲೀಪ್ ಅವರ ಸಾಮಾಜಿಕ ‌ಕಾರ್ಯ ಹೀಗೆ ಮುಂದುವರೆಯಬೇಕು ಎಂದರು. ಇದೇ ಮೊದಲ ಬಾರಿ ಹೋಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಇದೊಂದು ಒಳ್ಳೆಯ ಬೆಳವಣಿಗೆ. ಇದಕ್ಕೂ ಮೊದಲು ರಾತ್ರಿಯಾದರೆ ಕಲ್ಲು ಒಗೆಯುತ್ತಿದ್ದರು. ಸದ್ಯ ಈ ವರ್ಷ ಯಾವುದೇ ಸಮಸ್ಯೆ ಆಗಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳು ಉತ್ತಮ‌ ಕೆಲಸ‌ ಮಾಡ್ತಿವೆ ಎಂದರು.

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಕೋವಿಡ್ ‌ನಿಂದ ಮುಕ್ತರಾಗುವ ಕಾಲ ಬಂದಿದೆ. ಬೆಳಗಾವಿಯಲ್ಲಿ 100ರಷ್ಟು ವ್ಯಾಕ್ಸಿನೇಷನ್‌ ಮಾಡಿದ್ದು ಸಾಕಷ್ಟು ಪರಿಣಾಮ ಭೀರಿದೆ. ದಿಲೀಪ್ ಅವರು ಡಿಕೆ ಮೋಟಿವ್ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡ್ತಿದ್ದಾರೆ. ಇಂತಹ ಮನರಂಜನಾ ಕಾರ್ಯಕ್ರಮದಿಂದಲೇ ಹಳೆಯ ಗತಕಾಲದ ವೈಭವ ಮರಳಿ ಬರಲಿದೆ ಎಂದರು.

ಬೆಳಗಾವಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾತನಾಡಿ,‌ಇಂದಿನ ರಂಗಬರಸೆ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಬೆಳಗಾವಿ ನಗರದಲ್ಲಿ ಹೋಳಿ‌ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬೆಳಗಾವಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೋಳಿ ಆಚರಣೆ ಆಗುತ್ತೆ ಅಂತಾ ನನಗೆ ಗೊತ್ತಿರಲಿಲ್ಲ. ಇದಕ್ಕೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಇದೊಂದು ಉತ್ತಮ ಬೆಳವಣಿಗೆ. ಮುಂದೆ ಕೂಡ ಎಲ್ಲವೂ ಹೀಗೆ ನಡೆಯಬೇಕು ಎಂದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *