Breaking News

ಮಹಿಳಾ,ಬೀದಿ ವ್ಯಾಪಾರಿಗಳಿಗೆ ವಿಶ್ರಾಂತಿ,ಶೌಚಾಲಯಗಳ ವಿಚಾರದಲ್ಲಿ ಕ್ರಾಂತಿ…

ಬೆಳಗಾವಿ, ಮಾ.23(ಕರ್ನಾಟಕ ವಾರ್ತೆ): ಮಹಾನಗರ ಪಾಲಿಕೆಯ 2022-23 ನೇ ಸಾಲಿನಲ್ಲಿ 6.31 ಲಕ್ಷಗಳಷ್ಟು ಉಳತಾಯ ಆಯವ್ಯಯವನ್ನು ಮಂಡಿಸಲಾಗಿದೆ. ಮಹಾನಗರ ಪಾಲಿಕೆಯ 2022-23 ನೇ ಸಾಲಿನಲ್ಲಿ 44,765.22 ಲಕ್ಷಗಳಷ್ಟು ಅಂದಾಜು ಆದಾಯ ನಿರೀಕ್ಷಿಸಲಾಗಿದ್ದು, ಸಮರ್ಪಕವಾಗಿ ಬಜೆಟ್ ಬಳಕೆ ಮಾಡಲಾಗುವುದು ಪಾಲಿಕೆಯ ಆಡಳಿತಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಅವರು ತಿಳಿಸಿದರು.

ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಬುಧವಾರ (ಮಾ.23) ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

2022-23 ನೇ ಸಾಲಿನಲ್ಲಿ 44,758.91 ಲಕ್ಷಗಳಷ್ಟು ಅಂದಾಜು ವೆಚ್ಚ ಭರಿಸಲು ನಿರೀಕ್ಷಿಸಲಾಗಿದೆ.
ಬೀದಿ ದೀಪಗಳ ನಿರ್ವಹಣೆಗಾಗಿ 550 ಲಕ್ಷಗಳನ್ನು ವ್ಯಯಿಸಲು ನಿರ್ಧರಿಸಲಾಗಿದೆ ಹಾಗೂ ನಗರದಾಂದ್ಯಂತ ಸ್ನಾರ್ಟ ಸಿಟಿ ಸಹಯೋಗದೊಂದಿಗೆ ಎಲ್.ಇ.ಡಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಸ್ತೆ, ಚರಂಡಿ, ಪಾದಾಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಸಲು 550 ಲಕ್ಷ ( 5.5 ಕೋಟಿ) ನಿಗಧಿಪಡಿಸಿದೆ. ತುರ್ತು ಪರಿಸ್ಥಿತಿಯಲ್ಲಿ ನಗರದ ವಿವಿಧ ಅವಶ್ಯಕ ಮೂಲಭೂತ ಸೌಕರ್ಯಕ್ಕಾಗಿ 500 ಲಕ್ಷಗಳಷ್ಟು (5 ಕೋಟಿ) ನಿಗಧಿಪಡಿಸಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ದಿಗಾಗಿ 509 ಲಕ್ಷಗಳನ್ನು (5.09 ಕೋಟಿ) ಮೀಸಲಿಡಲಾಗಿದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ದಿಗಾಗಿ 167.37 ಲಕ್ಷಗಳನ್ನು (1.67 ಕೋಟಿ) ಮೀಸಲಿಡಲಾಗಿದೆ ಎಂದು ತಿಳಿಸಿದರು.

ವಿಕಲಚೇತನರ ಕಲ್ಯಾಣ ಅಭಿವೃದ್ದಿಗಾಗಿ 116.81 ಲಕ್ಷಗಳನ್ನು (1.17 ಕೋಟಿ) ಮೀಸಲಿಡಲಾಗಿದೆ. ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಸರಬರಾಜು, ಬೀದಿ ದೀಪಗಳನ್ನು ಅಳವಡಿಸುವುದು, ಶೌಚಾಲಯಗಳ ನಿರ್ಮಾಣಕ್ಕಾಗಿ ಆಯವ್ಯಯದಲ್ಲಿ 200 ಲಕ್ಷ (2 ಕೋಟಿ) ಕಾಯ್ದಿರಿಸಲಾಗಿದೆ.

ಬೀದಿ ಬದಿ ಮಹಿಳಾ ವ್ಯಾಪಾರಸ್ಥರಿಗೆ ವಿಶ್ರಾಂತಿ ಗೃಹ ನಿರ್ಮಾಣ:

ಡೇ-ನಲ್ಮ ಯೋಜನೆಯಡಿಯಲ್ಲಿ ನಗರದ 6 ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕಾಗಿ ವೆಂಡಿಂಗ ಝೋನ್ ಹಾಗೂ ಬೀದಿ ಬದಿ ವ್ಯಾಪಾರ ಮಾಡುವ ಮಹಿಳೆಯರಿಗಾಗಿ ವಿಶ್ರಾಂತಿ ಗೃಹ ನಿರ್ಮಾಣಕ್ಕಾಗಿ 500 ಲಕ್ಷ (5 ಕೋಟಿ) ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಮನೆ ಮನೆಗಳಿಗೆ ಒಣ ಮತ್ತು ಹಸಿಕಸ ವಿಂಗಡಣೆಗಾಗಿ ಡಸ್ಟಬಿನ್ ಪೂರೈಸಲು 200 ಲಕ್ಷಗಳ( 2 ಕೋಟಿ) ಅವಕಾಶ ಕಲ್ಪಿಸಲಾಗಿದೆ. ಉದ್ಯಾನವನ ಅಭಿವೃದ್ಧಿಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿನ್ನರ ಉದ್ಯಾನ, ನಾನಾ ನಾನಿ ಪಾರ್ಕ ಅಭಿವೃದ್ಧಿಗೆ 100 ಲಕ್ಷಗಳನ್ನು ( 1 ಕೋಟಿ) ನಿಗಧಿಪಡಿಸಿದೆ.

ಮಹಿಳೆಯರ ಪಿಂಕ್ ಶೌಚಾಲಯಗಳಿಗೆ 100 ಲಕ್ಷಗಳನ್ನು (1ಕೋಟಿ) ಕಾಯ್ದಿರಿಸಲಾಗಿದೆ ಹಾಗೂ ಮಹಿಳೆಯರ ಉತ್ತೇಜನಕ್ಕಾಗಿ ವಿಶೇಷ ನಿಧಿ 500 ಲಕ್ಷ(5 ಕೋಟಿ) ನಿಗಧಿಪಡಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಡೇ-ನಲ್ಮ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಮಹಿಳಾ ನಿರಾಶ್ರಿತ ಕೇಂದ್ರ ನಿರ್ಮಿಸಲು 50 ಲಕ್ಷಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಆವರಣದಲ್ಲಿ ಮೂಲಭೂತ ಸೌಕರ್ಯ:

ಪ್ರಮುಖ ವೃತ್ತಗಳಲ್ಲಿ ಪ್ರತಿಮೆ ಸ್ಥಾಪನೆಗಾಗಿ 100 ಲಕ್ಷ (1ಕೋಟಿ) ಕಾಯ್ದಿರಿಸಲಾಗಿದೆ. ಬೀದಿ ನಾಯಿಗಳ ನಿರ್ವಹಣೆಗಾಗಿ 60 ಲಕ್ಷ ಕಾಯ್ದಿರಿಸಲಾಗಿದೆ ಹಾಗೂ
ಜಿಲ್ಲಾಡಳಿತ ಕಚೇರಿಯ ಆವರಣದಲ್ಲಿ ಮೂಲಭೂತ ಸೌಕರ್ಯಕ್ಕಾಗಿ 50 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ಪತ್ರಕರ್ತರ ಕ್ಷೇಮನಿಧಿ ಸಲುವಾಗಿ 30 ಲಕ್ಷಗಳನ್ನು ಮರು ನಿಗಧಿಪಡಿಸಲಾಗಿದೆ. ವಿವಿಧ ಸ್ಮಶಾನಗಳ ನಿರ್ವಹಣೆಗಾಗಿ ಶಾಸಕರುಗಳ ಹಾಗೂ ಸಾರ್ವಜನಿಕರ ಸಲಹೆಯಂತೆ ಪರಿಸರ ಸ್ನೇಹಿ(ಕುಳ್ಳು) ಗಳಿಂದ ದಹನ ಕ್ರಿಯೆ ನಡೆಸಲು 50 ಲಕ್ಷಗಳನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು.

ಸಾಂಕ್ರಾಮಿಕ ರೋಗಗಳನ್ನು ತಡಗಟ್ಟಲು 50 ಲಕ್ಷಗಳನ್ನು ನಿಗಧಿಪಡಿಸಿದೆ ಹಾಗೂ ಪಾಲಿಕೆಯ ಆದಾಯದಲ್ಲಿ ಶೇ.1% ರಷ್ಟು ಮೋತ್ತದಲ್ಲಿ 13.61 ಲಕ್ಷಗಳನ್ನು ಕ್ರೀಡೆಗಳಿಗಾಗಿ ಮೀಸಲಿರಿಸಲಾಗಿದೆ ಎಂದು ಹೇಳಿದರು.

ನಗರದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಯೋಜನೆ:

ಮಹಾನಗರ ಪಾಲಿಕೆಯ ಒಡೆತನದ ಕ್ರೀಡಾ ಚಟುವಟಿಕೆಗಳಿಗಾಗಿ ನಿರ್ಮಸಲಾದ ಈಜುಕೊಳ, ಬ್ಯಾಡ್ಮಿಂಟನ್ ಹಾಲ್ ಹಾಗೂ ಹೈಟೆಕ್ ಜಿಮ್ ನಿರ್ವಹಣೆಗಾಗಿ 50 ಲಕ್ಷಗಳನ್ನು ಮೀಸಲಿಡಲಾಗಿದೆ.

ಒಂದೇ ಸಲ ಉಪಯೋಗಿಸುವಂತಹ ಪ್ಲ್ಯಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸ್ವಸಹಾಯ ಸಂಘಗಳ ಮೂಲಕ ಪರ್ಯಾಯ ವಸ್ತುಗಳಾದ ಪೇಪರ ಬ್ಯಾಗ್, ಬಟ್ಟೆ ಬ್ಯಾಗ್ ಗಳು ಹಾಗೂ ಇತರೆ ಬ್ಯಾಗಗಳ ತಾಯಾರಿಕೆಗೆ 10 ಲಕ್ಷಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ನಾಲ್ಕು ಉಪ ವಿಭಾಗ ಕೇಂದ್ರಗಳನ್ನು ಬಲಪಡಿಸಲು ಉದ್ದೇಶಿಸಿದ್ದು ಹಾಗೂ ಆಡಳಿತ ವಿಕೇಂದ್ರಿಕರಣಗೊಳಿಸಿ, ಸಾರ್ವಜನಿಕ ಸೇವೆಗಳಾದ ಪಹಣಿ ವಿತರಣೆ, ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ, ಜನನ-ಮರಣ ಪ್ರಮಾಣ ಪತ್ರ ವಿತರಣೆ, ಖಾತೆ ಬದಲಾವಣೆ (ಇ-ಆಸ್ತಿ), ಉದ್ಯಮೆ ಪರವಾನಿಗೆ ಹಾಗೂ ನವೀಕರಣ, ಇತ್ಯಾದಿ ಮೂಲಭೂತ ಸೇವೆಗಳನ್ನು ಒದಗಿಸಲು 20 ಲಕ್ಷಗಳನ್ನು ಮೀಸಲಿರಿಸಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿ ತೆರಿಗೆ, ನೀರಿನ ಕರ ಬಾಕಿ ಇರುವ ಕುರಿತು ತಂತ್ರಜ್ಞಾನವನ್ನು ಬಳಸಿ ಎಸ್.ಎಂ.ಎಸ್. ಮೂಲಕ ತೆರಿಗೆ ವಿವರದ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ 58 ವಾರ್ಡುಗಳ ಸರ್ವತೋಮುಖ ಅಭಿವೃದ್ಧಿ ಸೃಜಿಸಿ ಕಾಪಾಡುವದು ಹಾಗೂ ಸಮಸ್ತ ನಾಗರೀಕರಿಗೆ ಅತ್ಕøಷ್ಟವಾದ ಸೇವೆ ಒದಗಿಸಲು ಮಹಾನಗರ ಪಾಲಿಕೆ ಸದಾ ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *