Breaking News

ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಪದವೀಧರರು…

ಬೆಳಗಾವಿ ಜಿಲ್ಲೆಯ ಅರಭಾಂವಿಯಲ್ಲಿ ಅತೀ ಹೆಚ್ಚು,ಯಮಕನಮರ್ಡಿ ಕ್ಷೇತ್ರದಲ್ಲಿ ಅತೀ ಕಡಿಮೆ ಪದವೀಧರರು

ಬೆಳಗಾವಿ:ವಾಯುವ್ಯ ಪದವೀಧರರ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಜಯಪುರ ಬೆಳಗಾವಿ ಬಾಗಲಕೋಟೆ ಬರುತ್ತಿದ್ದು ಈ ಮೂರು ಜಿಲ್ಲೆಗಳ ಪೈಕಿ ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪದವೀಧರ ಮತದಾರರಿದ್ದಾರೆ.

ಪದವೀಧರರ ಮತದಾರರ ಇವತ್ತಿನ ಪಟ್ಟಿ ಪ್ರಕಾರ ಒಟ್ಟು 73,509 ಮತದಾರರಿದ್ದು ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 31,293 ಪದವೀಧರರು ಬಾಗಲಕೋಟೆ ಜಿಲ್ಲೆಯಲ್ಲಿ 27,196 ಹಾಗೂ ವಿಜಯಪುರ ಜಿಲ್ಲೆಯಲ್ಲಿ 15020 ಪದವೀಧರ ಮತದಾರ ಸಂಖ್ಯೆ ಇದೆ.

ವಾಯುವ್ಯ ಪದವೀಧರರ ಕ್ಷೇತ್ರದ ಚುನಾವಣೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆಯುವ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮತದಾರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಪಂಚಮಸಾಲಿ ಸಮಾಜದ ಪ್ರಭಾವಿ ಯುವ ನಾಯಕ ಕಿರಣ್ ಸಾಧುನವರ ಅವರನ್ನು ಕಣಕ್ಕೀಳಿಸಲು ನಿರ್ಧಾರಿಸಿದ್ದಾರೆ.ಈ ವಿಚಾರದಲ್ಲಿ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.

ಪದವೀಧರ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಲಿರುವ ಕಿರಣ್ ಸಾಧುನವರ ಅವರು ಈಗಾಗಲೇ ಬೆಳಗಾವಿ,ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಚುನಾವಣೆ ತಯಾರಿ ನಡೆಸಿದ್ದಾರೆ. ಚುನಾವಣೆಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಮತದಾರನ್ನು ಸೆಳೆಯಲು ಈಗಿನಿಂದಲೇ ಕೆಲಸ ಆರಂಭಿಸಿದ್ದಾರೆ.

ಚಿಕ್ಕೋಡಿ ಉಪವಿಭಾಗದಲ್ಲಿ ವ್ಯಾಪ್ತಿಯಲ್ಲಿ ಪದವೀಧರರ ಮತದಾರರ ಸಂಖ್ಯೆ;

ಬೆಳಗಾವಿ ಜಿಲ್ಲೆಯಲ್ಲಿ ತಾಲೂಕುವಾರು ಪದವೀಧರರ ಮತದಾರರ ಸಂಖ್ಯೆ ನೋಡೋದಾದ್ರೆ ಅರಭಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದ್ರೆ 2582 ಪದವೀಧರರ ಮತದಾರರು ಇದ್ದಾರೆ. ನಿಪ್ಪಾಣಿಯಲ್ಲಿ 1453, ಚಿಕ್ಕೋಡಿ-ಸದಲಗಾ 2523, ಅಥಣಿ 1790, ಕಾಗವಾಡ 1785, ಕುಡಚಿ 1850, ರಾಯಬಾಗ 1089, ಹುಕ್ಕೇರಿ 2094, ಯಮಕನಮರಡಿ ಕ್ಷೇತ್ರದಲ್ಲಿ ಅತಿ‌ ಕಡಿಮೆ 474 ಪದವೀಧರರ ಮತದಾರರು ಇದ್ದಾರೆ.

ಬೆಳಗಾವಿಯಲ್ಲಿ ಪದವೀಧರರ ಮತದಾರರ ಸಂಖ್ಯೆ;

ಬೆಳಗಾವಿ ಉತ್ತರ 1909, ಬೆಳಗಾವಿ ದಕ್ಷಿಣ 1887, ಗೋಕಾಕ 2580, ಖಾನಾಪೂರ 948, ಬೆಳಗಾವಿ ಗ್ರಾಮೀಣ 1021, ಕಿತ್ತೂರು 1201, ಬೈಲಹೊಂಗಲ 2135, ಸವದತ್ತಿ 1759, ರಾಮದುರ್ಗ 2213 ಮತದಾರಿದ್ದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 31293 ಪದವೀಧರರ ಮತದಾರರಿದ್ದಾರೆ.

ಪದವಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದ್ದು ಹೊಸ ಮತದಾರರ ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *