Breaking News

ಡಿಸಿಸಿ ಬ್ಯಾಂಕ್ ಚುನಾವಣೆ, ಕತ್ತಿ,ಬ್ರದರ್ಸ್,ಜಾರಕಿಹೊಳಿ ಬ್ರದರ್ಸ್ ನಡುವೆ ಗುದ್ದಾಟ…..!!!!

ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ತೆರವಾದ ಒಂದು ಸ್ಥಾನಕ್ಕಾಗಿ ಜಾರಕಿಹೊಳಿ ಬ್ರದರ್ಸ್ ಮತ್ತು ಕತ್ತಿ ಬ್ರದರ್ಸ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ.ಈ ವಿಚಾರದಲ್ಲಿ ಮಾಜಿ ಡಿಸಿಂ ಲಕ್ಷ್ಮಣ ಸವದಿ ಅವರ ನಡೆ ನಿರ್ಣಾಯಕವಾಗಲಿದ್ದು ಇಂದು ಮತದಾನ ನಡೆಯುತ್ತಿದೆ.ಡಿಸಿಸಿ ಬ್ಯಾಂಕ್ ಎದುರು ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ.

ಬೆಳಗಾವಿ: ಡಿಸಿಸಿ ಬ್ಯಾಂಕ್‌‌ನ ನಿರ್ದೇಶಕರ ತೆರವಾದ ಒಂದು ಕ್ಷೇತ್ರಕ್ಕೆ ಇಂದು ಮತದಾನ ನಡೆಯಲಿದ್ದು ಒಂದೇಒಂದು ಸೀಟು ಪಡೆಯಲು ಬೆಳಗಾವಿ ನಾಯಕರು ಕಸರತ್ತು ನಡೆಸಿದ್ದಾರೆ

.ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಣ್ ಸವದಿ & ಟೀಮ್ ಮಧ್ಯೆ ಮುಸುಕಿನ‌ ಗುದ್ದಾಟ‌ ಪ್ರಾರಭವಾಗಿದ್ದು.ಈ ಗುದ್ದಾಟದಲ್ಲಿ ಕತ್ತಿ ಸಹೋದರರು ಮತ್ತು ಲಕ್ಷ್ಮಣ ಸವದಿ ಅವರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದಾರೆ ಅನ್ನೋದು ಮೆಲ್ನೋಟಕ್ಕೆ ಕಂಡುಬಂದಿದೆ ಆದ್ರೆ ಲಕ್ಷ್ಮಣ ಸವದಿ ಅವರ ನಿಗೂಢ ನಡೆ ನಿರ್ಣಾಯಕ ಎಂದು ಹೇಳಲಾಗುತ್ತಿದೆ.

ಇಂದು ನಡೆಯುತ್ತಿರುವ ಏಕಸ್ಥಾನದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ, ಇದೀಗ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಉಮೇಶ್ ಕತ್ತಿ, ಶಿಶಿಕಲಾ ಜೊಲ್ಲೆ ಒಂದು ಬಣವಾದರೆ.ಇತ್ತ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸಹೋದರರು ಸೇರಿ ಮತ್ತೊಂದು ಬಣವಾಗಿದೆ.

ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಅವಕ್ಕಣ್ಣನವರ್ ಎಂಬುವವರು ನಿಧನರಾಗಿದ್ದರು‌. ಅವರ ನಿಧನದಿಂದ ತೆರುವಾದ ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಅದರಲ್ಲಿ ಹತ್ತು ತಾಲೂಕಿನ ತಲಾ ಒಬ್ಬರಿಂದ ಹತ್ತು ಜನ ನಿರ್ದೇಶಕರಿಂದ ಇಂದು ಮತದಾನ ಮಾಡಲಿದ್ದಾರೆ.

ಸದ್ಯ ಕಣದಲ್ಲಿ ಮೃತ ಅಶೋಕ ಅವಕ್ಕಣ್ಣನವ ಪುತ್ರ ಸೇರಿ ಮೂರು ಜನ ಕಣದಲ್ಲಿದ್ದಾರೆ. ಅದರಲ್ಲಿ
ರಾಮದುರ್ಗದ ಫತೇಸಿಂಹ್ ಜಗಪಾತ್, ಮುನವಳ್ಳಿಯ ರವೀಂದ್ರ ಯಳಿಗಾರ.ಅಥಣಿಯ ಸಂಜು ಅವಕ್ಕನರ. ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.
ನಾಲ್ಕು ಗಂಟೆಯವರೆಗೆ ಡಿಸಿಸಿ ಬ್ಯಾಂಕ್ ನಲ್ಲಿ ನಡೆಯಲಿರುವ ಚುನಾವಣೆಯನ್ನು ಬೆಳಗಾವಿ ನಾಯಕರು ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಈ ಚುನಾವಣೆಯ ಫಲಿತಾಂಶ ಬೆಳಗಾವಿ ಜಿಲ್ಲಾ ರಾಜಕಾರಣದ ದಿಕ್ಸೂಚಿಯನ್ನು ಅದಲು ಬದಲು ಮಾಡಲಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *