ಇಪ್ಪತ್ತು ಸಾವಿರದ ಜಗಳ ಕೊಲೆಯಲ್ಲಿ ಅಂತ್ಯವಾಯ್ತು…..
ಬೆಳಗಾವಿ-ಬೆಳಗಾವಿ ಪಕ್ಕದ ರಣಕುಂಡೆ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು ತ್ವರಿತಗತಿಯಲ್ಲಿ ಭೇದಿಸುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ.
ರಣಕುಂಡೆ ಗ್ರಾಮದ 31 ವರ್ಷದ ನಾಗೇಶ್ ಪಾಟೀಲ ಎಂಬಾತನನ್ನು ಮನೆಯಿಂದ ಅಪಹರಿಸಿ ಮಾರಕಾಸ್ತ್ರಗಳಿಂದ ಕೊಚ್ವಿ ಕೊಲೆ ಮಾಡಿ ಈತನ ಶವವನ್ನು ಮನೆಯ ಎದುರು ಬೀಸಾಕಿ ಪರಾರಿಯಾಗಿದ್ದ ಮೂರು ಜನ ಹಂತಕರನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಕೊಲೆ ಮಾಡಿದವರು ಕೊಲೆಯಾದ ನಾಗೇಶ್ ಪಾಟೀಲನ ಸ್ನೇಹಿತರೇ ಆಗಿದ್ದು ಕೊಲೆಗೆ ನಾಲ್ಕು ವರ್ಷದ ಹಿಂದಿನ 20 ಸಾವಿರ ರೂಗಳ ವ್ಯವಹಾರವೇ ಕಾರಣ ಎಂದು ಹೇಳಲಾಗಿದ್ದು ಕೊಲೆ ಪ್ರಕರಣ ಆರೋಪಿಗಳಾದ ಪ್ರಮೋದ ಪಾಟೀಲ,ಈತನ ಸಹೋದರ ಶ್ರೀಧರ ಪಾಟೀಲ ಮತ್ತು ಇವರಿಬ್ಬರ. ಗೆಳೆಯ ಮಹೇಶ್ ಕಂಗ್ರಾಳಕರ ಎಂಬಾತರನ್ನು ಬೆಳಗಾವಿ ಗ್ರಾಮೀಣ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಹತ್ಯೆಯಾದ ನಾಗೇಶ್ ಪಾಟೀಲ ಅವರ ತಂದೆ ಪ್ರಮೋದ್ ಪಾಟೀಲಗೆ ಇಪ್ಪತ್ತು ಸಾವಿರ ರೂಗಳನ್ನು ನಾಲ್ಕು ವರ್ಷದ ಹಿಂದೆ ಕೊಟ್ಟಿದ್ದರು ಈ ಹಣ ಕೊಡುವಂತೆ ನಾಗೇಶ್ ಪ್ರಮೋದ್ ಗೆ ಪದೇ,ಪದೇ ಕೇಳುತ್ತಲೇ ಇದ್ದ, ಈ ಕುರಿತು ಎರಡು ವಾರಗಳ ಹಿಂದೆ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಪದೇ ಪದೇ ಹಣ ಕೇಳಬೇಡ ಎಂದು ಪ್ರಮೋದ್ ಪಾಟೀಲ,ನಾಗೇಶ ಪಾಟೀಲಗೆ ಎಚ್ಚರಿಸುತ್ತಲೇ ಇದ್ದ ,ಇದೇ ದ್ವೇಷ ಇಟ್ಕೊಂಡು ಪ್ರಮೋದ ಪಾಟೀಲ ತನ್ನ ಸಹೋದರ ಶ್ರೀಧರ ಮತ್ತು ಸ್ನೇಹಿತ ಮಹೇಶನ ಜೊತೆ ಸೇರಿ ಮದ್ಯರಾತ್ರಿ ನಾಗೇಶ ಪಾಟೀಲನ ಮನೆಗೆ ಹೋಗಿ ಬಾಗಿಲು ಬಡಿದು ನಾಗೇಶನನ್ನು ಕಾರಿನಲ್ಲಿ ಅಪಹರಿಸಿ ಕೊಲೆ ಮಾಡಿ ಶವವನ್ನು ನಾಗೇಶನ ಮನೆಯ ಎದುರೇ ಎಸೆದಿದ್ದರು.
ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು ಮೂರು ಜನ ಹಂತಕರನ್ನು ಬಂಧಿಸಿದ್ದಾರೆ.