ಬಣವಿ ಭಸ್ಮ: ರೈತರಿಗೆ 90 ಸಾವಿರ ರೂ. ಪರಿಹಾರ ನೀಡಿದ ರಾಹುಲ್ ಜಾರಕಿಹೊಳಿ
ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಸಾರ್ವಜನಿಕರ, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ನಗರದ ಕುವೆಂಪು ನಗರ ಕಚೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ಕೆದನೂರ, ಅಗಸಗಿ, ಮನ್ನಿಕೇರಿ ಗ್ರಾಮದಲ್ಲಿ ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ತಲಾ 10 ಸಾವಿರ ರೂ. ದಂತೆ ಒಟ್ಟು 90 ಸಾವಿರ ರೂಪಾಯಿ ವಿತರಿಸಿ ಅವರು ಮಾತನಾಡಿದರು.
ಕಳೆದ ಇಪ್ಪತ್ತು ವರ್ಷಗಳಿಂದ ಜನರ ಸಮಸ್ಯೆಗೆ ಯಾರೂ ಸ್ಪಂದಿಸದ ಕಾರಣ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಸಬಾಗದಿಂದ ಕುಂತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅಲ್ಲಿನ ಸಾರ್ವಜನಿಕರು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದರು.
ಕಾರಣ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ಕಾಸಬಾಗದಿಂದ ಕುಂತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅಲ್ಲಿನ ಸಾರ್ವಜನಿಕರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು 1 ಲಕ್ಷ ರೂಪಾಯಿ ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪರಶುರಾಮ ಧಗೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ., ಅರುಣ ಕಟಾಂಬಳೆ, ಮಲಗೌಡ ಪಾಟೀಲ್,
ಶಿವಪುತ್ರ ಮೇತ್ರಿ, ಅಪ್ಪಯ್ಯಗೌಡ ಪಾಟೀಲ್, ಅಮೃತ ಮುದ್ದೆಣ್ಣವರ್, ಮಹಾದೇವ ಸಂಭಾಜಿ, ಗಾವಡು ಬಿರ್ಜೆ, ಯಲ್ಲಪ್ಪಾ ರಾದಾಯಿ, ಗುಂಡು ಕುರೇನ್ನವರ್, ಪುಂಡಲೀಕ ಕಜಬಾನಟ್ಟಿ ಸೇರಿದಂತೆ ಇತರರು ಇದ್ದರು.