Breaking News

ಅಕ್ಷರಗಳಿಗೆ ಅಚ್ವು ಹಾಕಿ..ಹೋರಾಟದ ಕಿಚ್ವು ಹಚ್ವಿ…ಸ್ವಾತಂತ್ರ್ಯದ “ಸಂದೇಶ” ಸಾರಿದ್ರು…!!

ಬೆಳಗಾವಿ-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಳಗಾವಿ ಜಿಲ್ಲಾ ಶಾಖೆಯು ‘ಭಾನುವಾರದ ಬಾಂಧವ್ಯ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಈ ಕಾರ್ಯಕ್ರಮದ ಮೂಲಕ ಪ್ರತಿ ಭಾನುವಾರ ಸಂಘದ ಅಧ್ಯಕ್ಷ ದಿಲೀಪ ಕುರಂದವಾಡೆ ಮತ್ತವರ ತಂಡ ಪ್ರತಿ ಭಾನುವಾರ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸುವುದಲ್ಲದೆ, ಅವರ ಸಂಕಷ್ಟಗಳನ್ನು ತಿಳಿದುಕೊಂಡು ಸಂಘದ ಪರವಾಗಿ ಅವರಿಗೆ ಸಾಧ್ಯವಾದ ಸಹಾಯ ಮಾಡುವ ಕಾರ್ಯಕ್ರಮ ಇದಾಗಿದೆ.

ಇದರ ಪ್ರಥಮ ಕಾರ್ಯಕ್ರಮ ಈ ಭಾನುವಾರ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಕಟಣೆ ಆರಂಭಿಸಿದ ಜಿಲ್ಲೆಯ ಅತ್ಯಂತ ಹಳೆಯ ಪತ್ರಿಗಳಲ್ಲಿ ಒಂದಾದ ಕನ್ನಡ ಅಕ್ಷರಗಳ ಮೂಲಕ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕನ್ನಡ ದಿನಪತ್ರಿಕೆಯಾದ ಸಂದೇಶ ದಿನಪತ್ರಿಕೆ ಸಂಪಾದಕರಾದ ಅರವಿಂದ ದೇಶಪಾಂಡೆ ಅವರನ್ನು ಬಡಕಲ್ ಗಲ್ಲಿಯ ಪತ್ರಿಕಾ ಕಚೇರಿಗೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿತು.

ಈ ಸಂದರ್ಭದಲ್ಲಿ ಸಂಪಾದಕರಾದ ಅರವಿಂದ ದೇಶಪಾಂಡೆ ಅವರು ಪತ್ರಿಕೆ ಬೆಳೆದು ಬಂದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. 1934ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ತಮ್ಮ ತಂದೆಯವರಾದ ಗೋಪಾಲರಾವ ದೇಶಪಾಂಡೆಯವರು ಕನ್ನಡ ಅಕ್ಷರ ಅಚ್ಚು ಹಾಕುವ ಮೂಲಕ ಪತ್ರಿಕೆ ಪ್ರಾರಂಭಿಸಿದರು. ಪತ್ರಿಕೆ ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ವಿಶೇಷ ಲೇಖನಗಳನ್ನು ಪ್ರಕಟಿಸಿ ಜನರನ್ನು ಜಾಗೃತಗೊಳಿಸುವ ಮಹತ್ತರ ಕಾರ್ಯ ಮಾಡಿದೆ. ನಂತರದಲ್ಲಿ ಮರಾಠಿಗರು ಕನ್ನಡ ಹಾಗೂ ಕನ್ನಡಿಗರ ಮೇಲೆ ನಡೆಸಿದ ದಬ್ಬಾಳಿಕೆಯ ವಿರುದ್ಧ ನಿರ್ಭಯವಾಗಿ ಬರೆದು ಕನ್ನಡದ ಕಹಳೆ ಮೊಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. 70 ರ ದಶಕದಲ್ಲಿ ತಮ್ಮ ತಂದೆಯವರು ವಿಧಿವಶರಾದ ನಂತರ ತಾವು ಪತ್ರಿಕೆಯ ಮುದ್ರಣ ಜವಾಬ್ದಾರಿ ವಹಿಸಿಕೊಂಡು ಆರ್ಥಿಕ ಸಂಕಷ್ಟ ಹಾಗೂ ಹಲವು ತೊಂದರೆಗಳ ಮಧ್ಯೆಯೂ ಪತ್ರಿಕೆಯ ಮುದ್ರಣವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದೇನೆ. ಪತ್ರಿಕೆ ಸುಮಾರು 88 ವರ್ಷಗಳವರಗೆ ನಿರಂತವಾಗಿ ಕನ್ನಡ ನಾಡು, ನುಡಿಗಾಗಿ ಶ್ರಮಿಸುತ್ತಿದೆ. ಆದರೆ, ಪತ್ರಿಕೆಯ ಸೇವೆಯನ್ನು ಸರಕಾರ ಗುರುತಿಸುವ ಕೆಲಸ ಮಾಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

‌ಈ ವೇಳೆ ಸಂಘದ ಅಧ್ಯಕ್ಷ ದಿಲೀಪ ಕುರಂದವಾಡೆ ಅವರು ಮಾತನಾಡಿ, ದೇಶ ಹಾಗೂ ನಾಡು,ನುಡಿಗೆ ಸಂದೇಶ ಪತ್ರಿಕೆಯ ಕೊಡುಗೆ ಶ್ಲಾಘನೀಯವಾಗಿದೆ. ಅರವಿಂದ ದೇಶಪಾಂಡೆ ಅವರು ಹಲವು ಸಂಕಷ್ಟಗಳ ಮಧ್ಯೆಯೂ ನಿರಂತರ ಪತ್ರಿಕೆಯ ಮುದ್ರಣ ಮುಂದುವರಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅವರೊಂದಿಗಿದೆ. ಸರಕಾರದಿಂದ ಪತ್ರಿಕೆಗೆ ಸಲ್ಲಬೇಕಾದ ಗೌರವ ಸಿಗುವ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದು ಅಭಯ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಮೆಹಬೂಬ್ ಮಕಾನದಾರ,ರವಿ ಉಪ್ಪಾರ್,ನಾಗರಾಜ್ ತುಪ್ಪದ ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *