ಬೆಳಗಾವಿ-ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ,ಆತ್ಮಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದ್ದು,ಉಡುಪಿ ಪೋಲೀಸರು ಬೆಳಗಾವಿಯಲ್ಲಿ ಠಖಾನಿ ಹೂಡಿದ್ದಾರೆ.
ಇಂದು ಬೆಳಗಾವಿ ಪಕ್ಕದ ಹಿಂಡಲಗಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಉಡುಪಿ ಪೋಲೀಸರು ಹಾಲಿ ಪಿಡಿಓ ವಸಂತಕುಮಾರಿ,ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ ಕಾಮಗಾರಿ ನಡೆಸಿದ ಸಂಧರ್ಭದಲ್ಲಿ ಹಿಂಡಲಗಾ ಗ್ರಾಪಂ ಪಿಡಿಓ ಆಗಿ ಕಾರ್ಯನಿರ್ವಹಿಸಿದ ಗಂಗಾಧರ ನಾಯಕ ಇಬ್ಬರನ್ನು ಪೋಲೀಸರು ವಿಚಾರಣೆಗೊಳಪಡೊಸಿ ಮಾಹಿತಿ ಸಂಗ್ರಹಿಸಿದರು.
ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮಂಡೋಲ್ಕರ್ ಅವರು ಉಡುಪಿ ಪೋಲೀಸರ ಎದುರು ಹಾಜರ್ ಆಗಬೇಕಿತ್ತು,ಅವರ ಬರುವಿಕೆಗಾಗಿ ಉಡುಪಿ ಪೋಲೀಸರು ಎರಡು ತಾಸು ಕಾಯ್ದು ವಾಪಸ್ ಹೋಗಿದ್ದು,ನಾಳೆಯೂ ಪೋಲೀಸರ ತಂಡ ಹಿಂಡಲಗಾ ಗ್ರಾಮ ಪಂಚಾಯತಿಗೆ ಹೋಗಿ ಅದ್ಯಕ್ಷ ನಾಗೇಶ್ ಮಂಡೋಲ್ಕರ್ ಅವರನ್ನು ವಿಚಾರಣೆ ಮಾಡಲಿದೆ.
ಗುತ್ತಿಗೆದಾರ ಸಂತೋಷ ಪಾಟೀಲ ಅಂತ್ಯಕ್ರಿಯೆ ಮುಗಿದ ಮಾರನೇಯ ದಿನವೇ ಬೆಳಗಾವಿಗೆ ಆಗಮಿಸಿರುವ ಉಡುಪಿ ಪೋಲೀಸರು ಈಗಾಗಲೇ ಸಂತೋಷ ಪಾಟೀಲ ಅವರ ಕುಟುಂಬದವರನ್ನು ವಿಚಾರಣೆ ಮಾಡಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
*ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಸಂತೋಷ ಪಾಟೀಲ ಕೆಲಸ ಮಾಡಿಲ್ಲ ನಾವು ಕೆಲಸ ಮಾಡಿದ್ದೇವೆ*
ಬೆಳಗಾವಿ: ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಸಂತೋಷ ಪಾಟೀಲ್ ಹಣ ಹಾಕಿಲ್ಲ. ನಾವು ಹೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಸಂತೋಷ ಪಾಟೀಲ ಕಡೆಯಿಂದ ತುಂಡು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ರಾಜು ಜಾಧವ್ ಹೇಳಿದರು.
ಗೋಕಾಕನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮತ್ತು ಸಂತೋಷ ನಮಗೆ ಕೆಲಸ ಮಾಡಿ ಅಂತಾ ಹೇಳಿದ್ದರು. ಈ ಪ್ರಕಾರ ನಾವು ಕೆಲಸ ಮಾಡಿದ್ದೇವೆ. ನಾವು ವರ್ಕ್ ಆರ್ಡರ್ ಕೇಳಿದಾಗ ನನ್ನ ಬಳಿಕ ವರ್ಕ್ ಆರ್ಡರ್ ಇದೆ ಅಂತಾ ಹೇಳಿದ್ದಲ್ಲದೇ ನೀವು ಕಾಳಜಿ ಮಾಡಬೇಡಿ ಕೆಲಸ ಮಾಡಿ ಅಂತಾ ಹೇಳಿದ್ದರು. ನಾವು ಯಾರು ಕೂಡ ಈಶ್ವರಪ್ಪ ಅವರನ್ನ ಭೇಟಿಯಾಗಿಲ್ಲ ಎಂದರು.
ನಾನು ಒಬ್ಬನೇ 27ಲಕ್ಷ ರೂಪಾಯಿ ಕಾಮಗಾರಿ ಮಾಡಿದ್ದೇನೆ. ನನ್ನ ಜತೆಗೆ ಹನ್ನೆರಡು ಜನ ತಮ್ಮ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿದ್ದಾರೆ. ನಾವು ಹಣ ಹಾಕಿ ಕೆಲಸ ಮಾಡಿದ್ದಕ್ಕೆ ಸಂತೋಷ ಹಣ ಹಾಕಿರುವುದಾಗಿ ಹೇಳಿರಬಹುದು ಎಂದು ರಾಜು ಜಾಧವ್ ತಿಳಿಸಿದ್ದಾರೆ.
ಇದಕ್ಕೂ ಮುಂಚೆ ಗೋಕಾಕನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನ ಗೌಪ್ಯವಾಗಿ ಭೇಟಿಯಾಗಿದರು. ಹಿಂಡಲಗಾ ಗ್ರಾಮದಲ್ಲಿ ಸಂತೋಷ ಕಡೆಯಿಂದ ತುಂಡು ಗುತ್ತಿಗೆದಾರಿಕೆ ಪಡೆದಿದ್ದ ಹನ್ನೆರಡ ಜನ ಗುತ್ತಿಗೆದಾರರು ರಮೇಶ ಜಾರಕಿಹೊಳಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.