Breaking News

ನಾಳೆ ಮಂಗಳವಾರ ಬೆಳಗಾವಿಗೆ ಮತ್ತೆ ಬರ್ತಾರೆ ಡಿ.ಕೆ ಶಿವಕುಮಾರ್…

.

ಬೆಳಗಾವಿ – ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ,ಈಗ ರಾಜ್ಯದ ಗಮನ ಸೆಳೆದಿದ್ದು, ನಾಳೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ಬೆಳಗಾವಿಗೆ ಭೇಟಿ ನೀಡಲಿದ್ದಾರೆ.

ನಾಳೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಡಿಕೆ ಶಿವಕುಮಾರ್ ನೇರವಾಗಿ ಬಡಸ್ ಗ್ರಾಮಕ್ಕೆ ತೆರಳಿ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

ಈಗಾಗಲೇ ಒಂದು ಬಾರಿ ಬೆಳಗಾವಿಗೆ ಭೇಟಿ ನೀಡಿ ಸಂತೋಷ ಪಾಟೀಲ ಅವರ ಮನೆಗೆ ಭೇಟಿ ನೀಡಿ ,11 ಲಕ್ಷ ರೂ ಪರಿಹಾರ ನೀಡುವದಾಗಿ ಘೋಷಣೆ ಮಾಡಿ ಹೋಗಿದ್ದ ಡಿ.ಕೆ ಶಿವಕುಮಾರ್ ನಾಳೆ ಮತ್ತೆ ಬೆಳಗಾವಿಗೆ ಬರುತ್ತಿರುವದು ವಿಶೇಷವಾಗಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಕೆಲವು ವಿಚಾರಗಳನ್ನು ಬಹಿರಂಗ ಪಡಿಸುವದಾಗಿ ಹೇಳಿಕೊಂಡಿದ್ದರು ಆದ್ರೆ ರಮೇಶ್ ಜಾರಕಿಹೊಳಿ ಇವತ್ತು ಸೋಮವಾರ ಪತ್ರಿಕಾಗೋಷ್ಠಿ ನಡೆಸಲಿಲ್ಲ,ಇದರ ಬೆನ್ನಲ್ಲೇ ಈಗ ಡಿ.ಕೆ ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡುತ್ತಿರುವ ವಿಷಯ ಈಗ ತೀವ್ರ ಕುತೂಹಲ ಕೆರಳಿಸಿದೆ.

ನಾಳೆ ಬೆಳಗಾವಿಗೆ ಬರುತ್ತಿರುವ ಡಿ.ಕೆ ಶಿವಕುಮಾರ್ ಏನ್ ಹೇಳ್ತಾರೆ ಕಾದು ನೋಡಬೇಕು.

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *