Breaking News

ಹಿಂಡಲಗಾ ಕಾಮಗಾರಿಗೆ ಅನುಮೋದನೆ ಸಿಕ್ಕಿಲ್ಲ, ಪತ್ರದಲ್ಲಿ ಹಿಂದಿನ ಜಿಪಂ ಅಧ್ಯಕ್ಷ ಹಸ್ತಾಕ್ಷರ ಪೋರ್ಜರಿ

ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಜಿಪಂ ಮಾಜಿ ಅಧ್ಯಕ್ಷೆ ಆಶಾ ಐಹೊಳೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಅವರ ಹಸ್ತಾಕ್ಷರವನ್ನು ಪೋರ್ಜರಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಕುರಿತು ತನಿಖೆಗೆ ಆದೇಶಿಸಿರುವ ಜಿಪಂ ಸಿಇಓ ದರ್ಶನ ಅವರು ಹಿಂಡಲಗಾದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿಲ್ಲ. ಹಿಂದಿನ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಅವರ ಹಸ್ತಾಕ್ಷರವನ್ನು ಫೋರ್ಜರಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಹಿಂಡಲಗಾ ಗ್ರಾಮದ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಪತ್ರ ನೀಡುವಂತೆ ಕೋರಿ ಗ್ರಾಪಂ ಅಧ್ಯಕ್ಷರು, ಸದಸ್ಯರ ಮನವಿ ಮೇರೆಗೆ ನಾನು ಅವರಿಗೆ ಪತ್ರ ಕೊಟ್ಟಿದ್ದು ನಿಜ. ಆದರೆ, ಸಂತೋಷ ಪಾಟೀಲ ಅವರನ್ನು ನಾನು ಯಾವತ್ತೂ ಮುಖಾಮುಖಿಯಾಗಿ ಭೇಟಿಯಾಗಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷೆ ಆಶಾ ಐಹೊಳೆ ಸ್ಪಷ್ಟಪಡಿಸಿದ್ದಾರೆ.

೨೦೨೦ರಲ್ಲಿ ಹಿಂಡಲಗಾ ಗ್ರಾಮದದೇವತೆ ಲಕ್ಷ್ಮೀದೇವಿ ಜಾತ್ರೆ ಇತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಪತ್ರ ನೀಡುವಂತೆ ಕೋರಿ ಗ್ರಾಪಂ ಸದಸ್ಯರು ನನ್ನ ಬಳಿ ಬಂದಿದ್ದರು. ಅಋೂರಿಗೆ ನಾನು ಪತ್ರ ನೀಡಿದ್ದು ನಿಜ. ಆದರೆ, ನಾನು ಕೊಟ್ಟ ಪತ್ರಕ್ಕೆ ಮುಂದಿನ ಕ್ರಮ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಆರ್‌ಡಿಪಿಆರ್ ಇಲಾಖೆ ಅನುಮೋದನೆ ನೀಡಿರುವ ವಿಷಯ ಇವತ್ತೆ ಗೊತ್ತಾಗಿದೆ ಎಂದರು.

ಆರ್‌ಡಿಪಿಆರ್ ಇಲಾಖೆಯಿಂದ ಬಂದಿರುವ ರಿಸೀವ್ ಕಾಫಿನೂ ನನಗೆ ಸಿಕ್ಕಿಲ್ಲ. ಜಿಪಂ ಅಧಿಕಾರಿಗಳು ಅದನ್ನು ಕಡತದಲ್ಲಿಟ್ಟಿರುತ್ತಾರೆ. ಕಾಮಗಾರಿಗಳ ಮಂಜೂರಾತಿಗೆ ನನ್ನ ಬಳಿ ಹಿಂಡಲಗಾ ಗ್ರಾಪಂ ಸದಸ್ಯರು ಬಂದಿದ್ದರು. ಆದರೆ, ಕೆಲಸ ಆದ ಬಗ್ಗೆ ನನಗೇನೂ ಮಾಹಿತಿ ನೀಡಿಲ್ಲ. ನನ್ನ ಪತ್ರಕ್ಕೆ ಅನುಮೋದನೆ ನೀಡಿರುವ ಪತ್ರ ಸಿಕ್ಕಿದ್ದು, ೧೭-೨-೨೦೨೧ಕ್ಕೆ ಅನುಮೋದನೆ ಆಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಾನು ಕೊಟ್ಟಿರುವ ಪತ್ರದ ಬಗ್ಗೆ ಮೇಲಧಿಕಾರಿಗಳಿಗೆ ಎಷ್ಟು ಮಾಹಿತಿ ಇದೆ ಎಂಬುದು ಕೂಡ ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *