ಖಾನಾಪೂರ ತಾಲ್ಲೂಕಿನ ಜಾಂಬೋಟಿ ಅರಣ್ಯಪ್ರದೇಶದಲ್ಲಿ ಪವಾಡವೇ ನಡೆದಿದೆ,ಅಜ್ಜಿ ಮನೆಗೆ ಹೋಗಿದ್ದ ಮೂರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು ಆದ್ರೆ ಇವತ್ತು ಅರಣ್ಯ ಅಧಿಕಾರಿಗಳ ಶೋಧ ಕಾರ್ಯಾಚರಣೆಯ ಫಲವಾಗಿ ಬಾಲಕಿ ಪತ್ತೆಯಾಗಿದ್ದು, ಇದಿಂದು ಪವಾಡ ಅಂತೀದಾರೆ ಖಾನಾಪೂರ ತಾಲ್ಲೂಕಿನ ಜನ
ಬೆಳಗಾವಿ- ಖಾನಾಪೂರ
ತಾಲೂಕಿನ ಜಾಂಬೋಟಿ ಹೋಬಳಿಯ ಚಿರೇಖಾನಿ ಗ್ರಾಮದ ತನ್ನ ಅಜ್ಜಿಯ ಮನೆಯ ಬಳಿ ಆಟವಾಡುವಾಗ ನಾಪತ್ತೆಯಾಗಿದ್ದ 3 ವರ್ಷದ ಹೆಣ್ಣು ಮಗು ನಾಲ್ಕು ದಿನಗಳ ಬಳಿಕ ಶನಿವಾರ ಸಂಜೆ 2.5 ಕಿ.ಮೀ. ದೂರದ ದಟ್ಟ ಅರಣ್ಯದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಏ. 26ರಂದು ತಾಲೂಕಿನ ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ ತಮ್ಮ ಪತ್ನಿ ಹಾಗೂ 3 ವರ್ಷ ವಯಸ್ಸಿನ ಪುತ್ರಿ ಅದಿತಿ ಜೊತೆ ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲುಚಿರೇಖಾನಿ ಗ್ರಾಮದ ತಮ್ಮ ಹೆಂಡತಿಯ ತವರು ಮನೆಗೆ ಬಂದಿದ್ದರು. ಮಂಗಳವಾರ ಮಧ್ಯಾಹ್ನ ಚಿರೇಖಾನಿಯ ತನ್ನ ಅಜ್ಜಿಯ ಮನೆಯ ಬಳಿ ಆಟವಾಟುತ್ತಿದ್ದ ಅದಿತಿ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದಳು.
ಚಿರೇಖಾನಿ ಗ್ರಾಮಸ್ಥರು ಮತ್ತು ಶಿವಾಜಿ ಕುಟುಂಬದ ಸದಸ್ಯರು ಬಾಲಕಿಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದ್ದರು.
ಆಕೆಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಪತ್ತೆಗಾಗಿ ಅರಣ್ಯ ಇಲಾಖೆಯ ನೆರವನ್ನು ಕೋರಿದ್ದರು. ಶುಕ್ರವಾರ ಮತ್ತು ಶನಿವಾರ ಅರಣ್ಯ ಇಲಾಖೆಯವರು ಚಿರೇಖಾನಿ, ಕೊಡುಗೈ ಮತ್ತು ಚಾಪೋಲಿ ಗ್ರಾಮದ ಯುವಕರ ನೆರವಿನೊಂದಿಗೆ ಶೋಧಕಾರ್ಯ ಕೈಗೊಂಡಿದ್ದರು.