ಬೆಳಗಾವಿ: ಈಜುಕೊಳಕ್ಕೆ ಜಿಗಿಯುವಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ.
ಜಾಧವ ನಗರದಲ್ಲಿ ಸೋಮವಾರ ಈ ಘಟನೆ ಸಂಭವಿಸಿದೆ.ಇಲ್ಲಿನ ಲಕ್ಷ್ಮಿಟೆಕ್ ನ ಮಿಲಿಟರಿ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದ ಗುರುದೇವಸಿಂಗ್ ಗುರುಪ್ರೀತಸಿಂಗ್ ಮೃತಪಟ್ಟ ಯುವಕ. ಈತ ಪಿಯು ವ್ಯಾಸಂಗ ಮಾಡುತ್ತಿದ್ದ.
ಹೆಚ್ಚು ಆಳವಿರುವ ಕಡೆ ಜಿಗಿಯಬೇಕಿದ್ದ ಈತ ಕಡಿಮೆ ಆಳವಿರುವಲ್ಲಿ ಜಿಗಿದಿದ್ದರಿಂದ ಅವಘಡ ಸಂಭವಿಸಿದೆ. ನಿತ್ಯವೂ ಈತ ಇಲ್ಲಿಯೇ ಪ್ರ್ಯಾಕ್ಟೀಸ್ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ