Breaking News

ಇಸ್ಪೀಟ್ ಆಡಿ…ಸಾಲ ಮಾಡಿ…ಆತ್ಮಹತ್ಯೆ ಮಾಡಿಕೊಂಡ ಯುವಕ…

ಬೆಳಗಾವಿ- ಪಕ್ಕದ ರಾಜ್ಯ ಗೋವಾದ ಕ್ಯಾಸೀನೋ,ಜೊತೆಗೆ ಪಕ್ಕದ ಮಹಾರಾಷ್ಟ್ರದ ಶಿನ್ನೋಳಿಯ ಜೂಜಾಟದ ಅಡ್ಡೆ,ಬೆಳಗಾವಿ ಯುವಕರನ್ನು ಬಲಿ ಪಡೆಯುತ್ತಿದ್ದೆ.ಕ್ಯಾಸೀನೋ ಮತ್ತು ಜೂಜಾಟದ ಚಟಕ್ಕೆ ಬೆಳಗಾವಿಯ ಯುವಕರೇ ಇದಕ್ಕೆ ಬಲಿಯಾಗುತ್ತಿದ್ದು ಯುವಕನೊಬ್ಬ ಇಸ್ಪೀಟ್ ಆಡಿ,ಸಾಲ ಮಾಡಿ ಇವತ್ತು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ ಬಸವನ ಕುಡಚಿ ಬಡಾವಣೆಯಲ್ಲಿ ನಡೆದಿದೆ‌.

ಕಲ್ಮೇಶ್ವರ ಪಾಂಡುರಂಗ ಬೆಡಕಾ 25 ಶಿವಾಜಿ ಗಲ್ಲಿಬಸವನ ಕುಡಚಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದು ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಲೇಶ್ವರ ಪಾಂಡುರಂಗ ಬೆಡಕಾ 25 ವರ್ಷದ ಯುವಕ ಇಸ್ಪೀಟ್ ಆಡಿ ಸಾಲ ಮಾಡಿಕೊಂಡಿದ್ದ,ಬಟದಟೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ಕಳೆದ ಎರಡ್ಮೂರು ದಿನಗಳಿಂದ ಮನೆ ಬಿಟ್ಟು ಹೋಗಿದ್ದ, ಬಸವನ ಕುಡಚಿಯ ಶಿವಾಜಿ ಗಲ್ಲಿಯ ಈತನ ಮನೆಯ ಪಕ್ಕದಲ್ಲಿರುವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಇವತ್ತು ಬೆಳಿಗ್ಗೆ ಬೆಳಕಿಗೆ ಬಂದಿದೆ.

Check Also

ಶಹಬ್ಬಾಷ್‌….ಬೆಳಗಾವಿ ಮಹಾಪೌರ ಮಂಗೇಶ್ ಪವಾರ್….!!

    ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಕನ್ನಡ- ಮರಾಠಿ ಜಗಳ, ಎಂಈಎಸ್ ಕೇಂದ್ರ ಎನ್ಬುವ ಕಾಲ …

Leave a Reply

Your email address will not be published. Required fields are marked *