ಬೆಳಗಾವಿ-ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪ ವಿಚಾರವಾಗಿ ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆ ನೀಡಿದ್ದು,ಯಾರ ಮಾಲೀಕತ್ವದ ಕಾರ್ಖಾನೆ ಎಂದು ಚಿಂತನೆ ಮಾಡದೇ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ.ಎಂದು ಸಚಿವರು ಹೇಳಿದರು.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದಿರಬಹುದು ಅದು ಅವರ ಇಲಾಖೆಗೆ ಸಂಬಂಧಿಸಿದು.
ಸಕ್ಕರೆ ಇಲಾಖೆಗೆ ಸಂಬಂಧಿಸಿದ್ದಿದ್ರೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ.ಯಾರು ಮಾಲೀಕರಿದ್ದಾರೆ,
ಯಾವ ಪಾರ್ಟಿಯವರಿದ್ದಾರೆ ನನಗೆ ಸಂಬಂಧವಿಲ್ಲ.
ನಮಗೆ ಯಾರ ಫ್ಯಾಕ್ಟರಿ ಎಂಬುವುದು ಮುಖ್ಯವಲ್ಲ.
ರೈತರ ಹಿತ ಕಾಪಾಡುವುದು ಸಕ್ಕರೆ ಇಲಾಖೆಯ ಕರ್ತವ್ಯ ಎಂದ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದ್ರು
ತುಟಿ ಬಿಚ್ಚಲಿಲ್ಲ….ಪ್ರತಿಕ್ರಿಯೆ ಕೊಡಲಿಲ್ಲ…
ಅಜಾನ್ ವಿರುದ್ಧ ಹನುಮಾನ್ ಚಾಲಿಸಾ ಅಭಿಯಾನ ವಿಚಾರ.ಧಾರ್ಮಿಕ ದಂಗಲ್ ಬಗ್ಗೆ ತುಟಿಬಿಚ್ಚದ ಸಚಿವರು.
ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆಗೆ ನಕಾರ.
ಶ್ರೀರಾಮ ಸೇನೆ ಅಭಿಯಾನ ಕುರಿತ ಮಾಧ್ಯಮಗಳ ಪ್ರಶ್ನೆಗೆ.
ಎರಡು ಕೈ ಮುಗಿದ ಸಚಿವ ಶಂಕರ ಪಾಟೀಲ ಮುನೇನಕೋಪ್ಪ.ನಾನು ಯಾವುದೇ ಕಾಂಟರ್ವರ್ಸಿ ವಿಚಾರದ ಬಗ್ಗೆ ಹೇಳಿಕೆ ನೀಡಲ್ಲ.
ಹನುಮಾನ್ ಚಾಲಿಸಾ ಅಭಿಯಾನದ ಬಗ್ಗೆ ಮೌನವಹಿಸಿದ ಸಚಿವರು ಥ್ಯಾಂಕ್ಯು ಎಂದು ಮಾತು ಮುಗಿಸಿದರು.