ಬೆಳಗಾವಿ-ಸಚಿವ ಸಂಪುಟ ಮುಖ್ಯಮಂತ್ರಿ ಪರಮಾಧಿಕಾರ,ಸಿಎಂ ದೆಹಲಿಗೆ ಹೋಗಿದ್ದಾರೆ, ಕೆಲ ಕೇಂದ್ರ ಸಚಿವರನ್ನ ಭೇಟಿ ಮಾಡಲಿದ್ದಾರೆ,ಯಾರನ್ನ ತಗೊತಾರೇ ಯಾರನ್ನ ಕೈ ಬಿಡ್ತಾರೆ ಅಂತಾ ಮುಖ್ಯಮಂತ್ರಿ ಅವರನ್ನೇ ಕೇಳಬೇಕು ಎಂದುಬೆಳಗಾವಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ವಿಚಾರ, ಸಿಎಂ, ರಾಷ್ಟ್ರೀಯ ನಾಯಕರಿಗೆ ಗೊತ್ತು,ಸಂಪುಟದ ಬಗ್ಗೆ ನಮ್ಮ ಮಂತ್ರಿಗಳಿಗೂ ಗೊತ್ತಾಗುವುದಿಲ್ಲ, ಯಾರಿಗೂ ಗೊತ್ತಾಗುವುದಿಲ್ಲರಮೇಶ್ ಜಾರಕಿಹೊಳಿ ಮಂತ್ರಿ ಆಗೋ ಬಗ್ಗೆ ನಾನು ಮುಖ್ಯಮಂತ್ರಿ ಕೇಳಿ ಹೇಳಬೇಕು, ಇಲ್ಲಾ ನೀವೇ ಮುಖ್ಯಮಂತ್ರಿ ಕೇಳಿ ಅಂದ್ರು ಸಚಿವ ಸೋಮಶೇಖರ್.
ನಾನೊಬ್ಬನೆ ಸರ್ಕಾರದ ತಂದಿಲ್ಲ,17ಜನರು ಸೇರಿ ಸರ್ಕಾರದ ಬಂದಿದೆ,ನನಗೆ ಸಹಕಾರ ಖಾತೆ ಕೊಟ್ಟಿದ್ದಾರೆ, ಅದನ್ನ ನಿರ್ವಹಿಸುತ್ತಿದ್ದೇವೆ.ಮಿಕ್ಕಿದ್ದೆಲ್ಲವೂ ಮುಖ್ಯಮಂತ್ರಿಗಳಿಗೆಬಿಟ್ಟದ್ದು,ಯಾರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅನ್ನೋದು ಸಿಎಂ ಗಮನಕ್ಕೆ ಇದೇ,ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ,ಯಾರಿಗೆ ಏನ ಮಾಡಬೇಕು ಅನ್ನೋದು ಮಾಹಿತಿ ಕೇಂದ್ರದ ನಾಯಕರಿಗೂ ಈ ಬಗ್ಗೆ ಮಾಹಿತಿಯಿದೆ,
ಹೀಗಾಗಿ ಮುಖ್ಯಮಂತ್ರಿಗಳು ಕೇಂದ್ರ ನಾಯಕರ ಜೊತೆಗೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡ್ತಾರೆ ಎಂದರು.
ನಮ್ಮದು ರಾಷ್ಟ್ರೀಯ ಪಕ್ಷ ಆಗಿದ್ದರಿಂದ ಸಿಎಂ ರಾಷ್ಟ್ರೀಯ ನಾಯಕರ ಕನ್ಸಲ್ಟ್ ಮಾಡಿ ಮಾಡ್ತಾರೆ ಎಂದ ಸಚಿವ ಸೋಮಶೇಖರ್ ಹೇಳಿದ್ರು.