ಬೆಳಗಾವಿ-ಹಿಜಾಬ್ ಆಯ್ತು,ದೇವಾಲಯಗಳ ಆವರಣದಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ಬಹಿಷ್ಕಾರ,ಹಾಕಿದ್ದಾಯ್ತು, ಆಜಾನ್ ವಿರುದ್ದ ಭಜನೆ ಮಾಡಿದ ಬಳಿಕ ಈಗ ಹೊಸ ವರಸೆ ಶುರುವಾಗಿದೆ. ಗೋಕಾಕ್ ತಾಲ್ಲೂಕಿನ ಪುಟ್ಟ ಹಳ್ಳಿಯೊಂದರಲ್ಲಿ ಮಸೀದಿಯ ಮೇಲೆ ಬೆಳಗಿನ ಜಾವ ಕೇಸರಿ ಧ್ವಜ ಹಾರಿಸುವ ಕೃತ್ಯವೂ ಈಗ ನಡೆದಿದೆ.
ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಘಟನೆ
ಅರಭಾವಿ ಸಮೀಪದ ಸತ್ತಿಗೇರಿ ಮಡ್ಡಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ ಸಮೀಪದ ಸತ್ತಿಗೇರಿ ಮಡ್ಡಿ ಗ್ರಾಮ ಇದಾಗಿದ್ದುಮುಂಜಾನೆ ನಮಾಜಗೆ ಬಂದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಕೇಸರಿ ಧ್ವಜ ತೆಗೆಸಿದ ಸ್ಥಳೀಯ ಹಿಂದೂ-ಮುಸ್ಲಿಂ ಹಿರಿಯರು.ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ ಮಾಡಿದ್ದಾರೆ.ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ