ಗಡಿವಿವಾದದ ಬಗ್ಗೆ ಮಾತನಾಡಲಿಲ್ಲ ಎಂಇಎಸ್ ನಾಯಕರ ಜೊತೆ ಸಭೆ ಮಾಡುವದನ್ನು ಬಿಡಲಿಲ್ಲ…
ಬೆಳಗಾವಿ- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ ಪವಾರ್ ಅವರು ಎರಡು ದಿನ ಬೆಳಗಾವಿ ಜಿಲ್ಲೆ ಮತ್ತು ಮಹಾನಗರದಲ್ಲಿ ನಡೆದ ವಿವಿದ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಆದ್ರೆ ಎಲ್ಲಿಯೂ ಬೆಳಗಾವಿ ಗಡಿವಿವಾದದ ಕುರಿತು ಅವರು ಮಾತನಾಡಲಿಲ್ಲ ಆದ್ರೆ ನಾಡದ್ರೋಹಿ ಎಂಇಎಸ್ ನಾಯಕರ ಜೊತೆ ಗುಪ್ತವಾಗಿ ಸಭೆ ಮಾಡುವದನ್ನು ಶರದ್ ಪವಾರ್ ಮರೆಯಲಿಲ್ಲ.
ಕಾರ್ಯಕ್ರಮದಲ್ಲಿ ಗಡಿ ವಿವಾದದ ಕುರಿತು ಮಾತನಾಡಿದ್ರೆ, ಅದು ಮತ್ರೊಂದು ವಿವಾದ ಆಗಬಹುದು ಎನ್ನುವ ಆತಂಕದಿಂದಲೇ ಶರದ್ ಪವಾರ್ ಯಾವ ಕಾರ್ಯಕ್ರಮದಲ್ಲೂ ಗಡಿ ವಿಚಾರವನ್ನು ಪ್ರಸ್ತಾಪ ಮಾಡಲಿಲ್ಲ.ಆದ್ರೆ ಬುಧವಾರ ಬೆಳಿಗ್ಗೆ ಬೆಳಗಾವಿ ಮಹಾನಗರದ ಜ್ಯೋತಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ಬಳಿಕ ಶರದ್ ಪವಾರ್ ಬೆಳಗಾವಿಯ ಎಂಇಎಸ್ ನಾಯಕರ ಜೊತೆ ಗುಪ್ತ ಸಭೆ ಮಾಡಿದ್ರು.
ಮಾಜಿ ಶಾಸಕ ಮನೋಹರ ಕಿಣೇಕರ,ಸೇರಿದಂತೆ ಹಲವಾರು ಜನ ಬೆಳಗಾವಿಯ ಎಂಇಎಸ್ ನಾಯಕರು ಶರದ ಪವಾರ್ ನಡೆಸಿದ ಗುಪ್ತ ಸಭೆಯಲ್ಕಿ ಭಾಗವಹಿಸಿದ್ದರು.
1980 ರ ದಶಕದಲ್ಲಿ ಶರದ್ ಪವಾರ್ ಗಡಿ ವಿವಾದದ ಕುರಿತು ಬೆಳಗಾವಿಯಲ್ಲಿ ಬೆಂಕಿ ಉಗುಳಿದ್ದರು.ಬೆಳಗಾವಿಯ ಮುಗ್ದ ಮರಾಠಿಗರನ್ನು ಕೆರಳಿಸಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿದ್ದರು. ಆಗಿನ ಎಸ್ ಪಿ ನಾರಾಯಣ ಅವರು ಶರದ್ ಪವಾರ್ ಅವರನ್ನು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಂಧಿಸಿದ್ದರು.
ಬೊರೊಬ್ಬರಿ ಮೂರು ದಶಕಗಳ ನಂತರ ಶರದ್ ಪವಾರ್ ಅವರಿಗೆ ಇವತ್ತು ಇದೇ ಚನ್ನಮ್ಮ ವೃತ್ತದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ,ಆದ್ರೆ ಶರದ್ ಪವಾರ್ ಅವರು ಎಂಇಎಸ್ ನಾಯಕರ ಜೊತೆ ಗುಪ್ತ ಸಭೆ ಮಾಡಿರುವ ವಿಚಾರ ಗಡಿಭಾಗದ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದೆ.