Breaking News

ವೇದಿಕೆ ಮೇಲೆ ಉರುಳಿದ ವಿದ್ಯುತ್ ಕಂಬ, ರಾಜ್ಯಸಭಾ ಸದಸ್ಯ ಕಡಾಡಿ ಬಚಾವ್…!!

ಬೆಳಗಾವಿ- ಸೌಂಡ್ ಸಿಸ್ಟಮ್ ಮತ್ತು ಹೈಮಾಸ್ಕ ಅಳವಡಿಸಿದ ಕಂಬ ಗಣ್ಯರ ವೇದಿಕೆ ಮೇಲೆ ಉರುಳಿ ಬಿದ್ದು ,ವೇದಿಕೆ ಮೇಲೆ ಆಸೀನರಾಗಿದ್ದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸೇರಿದಂತೆ ಅನೇಕ ಜನ ಗಣ್ಯರು ಬಚಾವ್ ಆಗಿದ್ದಾರೆ.

ರಾಜಾಪುರ ಗ್ರಾಮದಲ್ಲಿ ಜಾತ್ರೆ ವೇಳೆ ರಸಮಂಜರಿ ಲೈಟಿಂಗ್ ಟ್ರೆಸ್ ಉರುಳಿ ವೇದಿಕೆಯ ಮೇಲೆ ಬಿದ್ದಿದೆ.ರಾಜ್ಯಸಭಾ ಸದಸ್ಯ ಈರಣ್ಣಾ‌ ಕಡಾಡಿ ಪ್ರಣಾಪಾಯದಿಂದ ಪಾರಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಚೂನಮ್ಮ ದೇವಿ ಜಾತ್ರೆಯಲ್ಲಿ ಘಟನೆ ನಿನ್ನೆ ರಾತ್ರಿ ನಡೆದಿದೆ.

ಲೈಟಿಂಗ್ ಅಳವಡಿಸಿದ್ದ ಕಂಬ ವೇದಿಕೆ ಮೇಲೆ ಉರುಳಿ ಆಕಸ್ಮಿಕ ಅವಘಡ ಸಂಭವಿಸಿತು.ಇಬ್ಬರು ಮೂವರಿಗೆ ಗಾಯ ಆಗಿದ್ದು ನಾವೆಲ್ಲರೂ ಬಚಾವ್ ಆಗಿದ್ದೇವೆ.ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ,ಮಾದ್ಯಮಗಳಿಗೆ ವಿಡಿಯೋ ರಿಲೀಸ್ ಮಾಡಿದ್ದಾರೆ.ಗ್ರಾಮದ ಜಮೀನಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದಕ್ಕೆ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ವಲ್ಪ ಆಯತಪ್ಪಿದ್ರೂ ವೇದಿಕೆ ಮೇಲಿದ್ದ ಗಣ್ಯರ ಪ್ರಾಣ ಹಾನಿ ಆಗುತ್ತಿತ್ತು,ವಿದ್ಯುತ್ ಅವಘಡ ಕೂಡ ಸಂಭವಿಸುವ ಸಾಧ್ಯತೆ ಇತ್ತು,ದೇವಿಯ ಆಶೀರ್ವಾದದಿಂದ ನಾವೆಲ್ಲರೂ ಪ್ರಾಣಾಪಾಯದಿಂದಪಾರಾಗಿದ್ದೇವೆ.ಎಂದುಮೂಡಲಗಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದ್ದಾರೆ.

Check Also

ಶಹಬ್ಬಾಷ್‌….ಬೆಳಗಾವಿ ಮಹಾಪೌರ ಮಂಗೇಶ್ ಪವಾರ್….!!

    ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಕನ್ನಡ- ಮರಾಠಿ ಜಗಳ, ಎಂಈಎಸ್ ಕೇಂದ್ರ ಎನ್ಬುವ ಕಾಲ …

Leave a Reply

Your email address will not be published. Required fields are marked *