Breaking News

ಬೆಳಗಾವಿಯಲ್ಲಿ ವಿಶೇಷಚೇತನ ಮಕ್ಕಳ ವಿಶಿಷ್ಟ ಸಾಧನೆ

ಬೆಳಗಾವಿ, ಮೇ 19(ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಬೆಳಗಾವಿಯ ಕಿವುಡ ಮಕ್ಕಳ ಸರ್ಕಾರಿ ಶಾಲೆಯ 11 ವಿದ್ಯಾರ್ಥಿನಿಯರಲ್ಲಿ ಎಂಟು ಜನ A ಗ್ರೇಡ್ ,2 ಜನ B ಗ್ರೇಡ್ ಒಬ್ಬರು C ಗ್ರೇಡ್ ಪಡೆದು ಉತ್ತೀರ್ಣರಾಗಿದ್ದಾರೆ ಕುಮಾರಿ ಪ್ರತಿಭಾ ಹಣ ಮಂತ ಹೊನ್ನಾಪುರ 87% ಪ್ರಥಮ, ಕುಮಾರಿ ಪವಿತ್ರ ಪರಪ್ಪ ಕಾಪ್ಸೆ 86% ದ್ವಿತೀಯ ಕುಮಾರಿ ರುದ್ರಾಕ್ಷಿ ಸಂಗೊಳ್ಳಿ 85% ತೃತೀಯ ಸ್ಥಾನವನ್ನು ಪಡೆದು ಶಾಲೆ ಗೆ ಕೀರ್ತೀ ತಂದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಸವರಾಜು ಎ ಎಂ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಶ್ರೀ ನಾಮದೇವ್ ಬಿಲ್ಕರ್, ಶಾಲೆಯ ಪ್ರಭಾರಿ ಅಧೀಕ್ಷಕರಾದ ಶ್ರೀ ಡಿ.ಎನ್ ನಂದೇಶ್ವರ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಮಕ್ಕಳ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿ ಶುಭಕೋರಿದ್ದಾರೆ
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *