ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಮೇ ೨೯ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೆಳಗಾವಿಯ ನೆಹರೂ ನಗರದ ಕೆಎಲ್‌ಇ ಜೀರಗೆ ಸಭಾಭವನದಲ್ಲಿ ಮೂರು ವರ್ಷಗಳ ಮುನ್ನೋಟ ಮತ್ತುಮಾಧ್ಯಮ ಹಾಗೂ ಕಾನೂನು ವಿಷಯ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅಧ್ಯಕ್ಷತೆ ವಹಿಸುವರು. ಜಿಲ್ಲಾಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸುವರು.
ಇದೇ ವೇಳೆ ಉಮಾ ಮಹೇಶ ವೈದ್ಯ ವಿರಚಿತ ಮಾಧ್ಯಮದವರೆ ಈ ಕಾನೂನುಗಳ ಅರಿವಿರಲಿ ಪುಸ್ತಕವನ್ನು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತುಮುನ್ನೋಟದ ಕಿರುಹೊತ್ತಿಗೆಯನ್ನು, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಬಿಡುಗಡೆ ಮಾಡುವರು.
ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ, ಸಂಘದ ಜಿಲ್ಲಾಘಟಕದ ಗೌರವಾಧ್ಯಕ್ಷ ಭೀಮಶಿ ಜಾರಕಿಹೊಳಿ, ಭಾ.ಕಾ.ನಿ.ಪ. ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಪತ್ರಕರ್ತ ಎಚ್.ಬಿ. ಮದನಗೌಡರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಅಧ್ಯಕ್ಷ ದಿಲೀಪ ಕುರಂದವಾಡೆ , ಲೇಖಕಿ ಉಮಾ ಮಹೇಶ ವೈದ್ಯ ಉಪಸ್ಥಿತರಿರುವರು. ರಾಜ್ಯ ಘಟಕದ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಅಜ್ಜಮಾಡ ರಮೇಶ ಕುಟ್ಟಪ್ಪ, ಭವಾನಿಸಿಂಗ್ ಎಂ. ಠಾಕೂರ, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ ಕೆರಗೋಡು ಹಾಗೂ ನಿಂಗಪ್ಪ ಚಾವಡಿ ವಿಶೇಷ ಆಹ್ವಾನಿತರಾಗಿ ಪಾಲ್ಗೊ ಳ್ಳಲಿದ್ದಾರೆ.
ದಿಲೀಪ ಕುರಂದವಾಡೆ ಆಶಯ ಭಾಷಣ ಮಾಡುವರು.
ಮಧ್ಯಾಹ್ನ ೨.೩೦ಕ್ಕೆ ಬದಲಾಗುತ್ತಿರುವ ಕಾನೂನು ಮತ್ತು ಮಾಧ್ಯಮ ಹಾಗೂ ಆರೋಗ್ಯಕ್ಕಾಗಿ ಸಂಗೀತ’ ವಿಷಯ ಕುರಿತು ಕ್ರಮವಾಗಿ ಮಹೇಶ ವೈದ್ಯ ಮತ್ತು ಡಾ.ಸಂತೋಷ ಬೋರಾಡೆ ಉಪನ್ಯಾಸ ನೀಡುವರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ