ಬೆಳಗಾವಿ-ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಅಭಿವೃದ್ಧಿಗೆ ದಿಕ್ಸೂಚಿ ಯಾಗಬೇಕಿದ್ದ ಬೆಳಗಾವಿಯ ಸುವರ್ಣ ವಿಧಾನ ಸೌಧ ಈಗ ಮತ್ತೆ ಸುದ್ದಿಯಲ್ಲಿದೆ ಯಾಕೆಂದರೆ ಸರ್ಕಾರ ಇದನ್ನು ಸದುಪಯೋಗ ಪಡಿಸಿಕೊಳ್ಳುವುದರಲ್ಲಿ ವಿಫಲವಾಗಿದ್ದು ಈ ಸೌಧದ ಎದುರು ಶಾವಿಗೆ ಒಣಗಿ ಹಾಕಿದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿರುವ ರಾಜ್ಯ ಸರ್ಕಾರ ಈಗ ಟೀಕೆಗೆ ಗುರಿಯಾಗಿದೆ.
ಸುವರ್ಣ ವಿಧಾನ ಸೌಧದಲ್ಲಿ ದಿನಗೂಲಿ ಆಧಾರದ ಮೇಲೆ ಸ್ವಚ್ಚತಾ ಕಾಮಗಾರಿ ನಡೆಸುತ್ತಿದ್ದ ಪಕ್ಕದ ಕುಂಡಸಕೊಪ್ಪ ಗ್ರಾಮದ ಮಲ್ಲಮ್ಮ ಅರಿವಿಲ್ಲದೇ ಸೌಧದ ಎದುರು ಶಾವಿಗೆ ಒಣಗಿ ಹಾಕಿದ ಕಾರಣದಿಂದಾಗಿ ಅವಳನ್ನು ಲೋಕೋಪಯೋಗಿ ಇಲಾಖೆ ಕೆಲಸದಿಂದ ವಜಾ ಮಾಡಿದ್ದು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಸರ್ಕಾರ ಮಲ್ಲಮ್ಮಳಿಗೆ ಮತ್ತೆ ಸೌಧದಲ್ಲಿ ಕೆಲಸ ಕೊಡಬೇಕು ಎಂದು ಅಭಿಯಾನ ಶುರುಮಾಡಿದ್ದು ಐ ಸ್ಟಾಂಡ್ ವಿಥ್ ಯು ಮಲ್ಲಮ್ಮ ಎಂದು ಪೋಸ್ಟ್ ಮಾಡಿ ಮಲ್ಲಮ್ಮಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
*ಸಾರ್ವಜನಿಕರ ಪ್ರಶ್ನೆಗಳು*
ಪ್ರಶ್ನೆ ನಂಬರ್ 1)
ಸರ್ಕಾರ ಬೆಳಗಾವಿ ಸುವರ್ಣ ಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಹೇಳಿತ್ತು ಆದರೆ ಸರ್ಕಾರ ನುಡಿದಂತೆ ನಡೆದಿಲ್ಲ. ಹಾಗಾದ್ರೆ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳವವರು ಯಾರು ?
ಪ್ರಶ್ನೆ ನಂ 2)
ಇಲ್ಲಿಯ ಕಾರ್ಮಿಕರಿಗೆ ವೇತನ ಪಾವತಿ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಗುತ್ತಿಗೆದಾರನ ಮೇಲೆ ಕ್ರಮ ಯಾಕಿಲ್ಲ.?
ಪ್ರಶ್ನೆ ನಂ.3)
ಕಾರ್ಮಿಕರಿಗೆ ಸುವರ್ಣ ಸೌಧದ ಘನತೆ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲವಾಗಿರುವ ಲೋಕೋಪಯೋಗಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು?
ಪ್ರಶ್ನೆ ನಂ.4) ಬೆಳಗಾವಿಯ ಸುವರ್ಣ ಸೌಧ ಭೂತ ಬಂಗಲೆ ಎಂವ ಹಣೆ ಪಟ್ಟಿಯಿಂದ ಹೊರ ಬಂದು ಕ್ರಿಯಾಶೀಲ ಆಗೋದು ಯಾವಾಗ?
ಪ್ರಶ್ನೆ ನಂ..5) ಅಧಿಕಾರಕ್ಕೆ ಬಂದ 24 ಘಂಟೆ ಒಳಗಾಗಿ ರಾಜ್ಯ ಮಟ್ಟದ ಕಚೇರಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡುವುದಾಗಿ ಉತ್ತರ ಕರ್ನಾಟಕ ಮಠಾಧೀಶರ ಎದುರು ಪ್ರಮಾಣ ಮಾಡಿ ನುಡಿದಂತೆ ನಡೆಯದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಪ್ರಶ್ನೆ ಮಾಡುವವರು ಯಾರು?
ಪ್ರಶ್ನೆ ನಂ.6 ) ಉತ್ತರ ಕರ್ನಾಟಕದವರೇ ಆಗಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಸಚಿವ ಸಂಪುಟದ ಸಭೆ ನಡೆಸುವ ನಿರ್ಧಾರ ಕೈಗೊಳ್ಳುವುದು ಯಾವಾಗ?
ಹೀಗೆ ಸುವರ್ಣ ಸೌಧದ ಅಭಿವೃದ್ಧಿ ಕುರಿತು ಸಾರ್ವಜನಿಕರು ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿದ್ದು ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ತಕ್ಕ ಉತ್ತರ ಕೊಡದಿದ್ದರೆ ಮುಂದಿನ ದಿನ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಈ ಎಲ್ಲಾ ಪ್ರಶ್ನೆಗಳು ಮಾರಕವಾಗುವುದರಲ್ಲಿ ಸಂದೇಹವಿಲ್ಲ.