ಬೆಳಗಾವಿ: ತಾಲ್ಲೂಕಿನ ದೇಸೂರ ಗ್ರಾಮದ ರೈಲ್ವೆ ನಿಲ್ದಾಣ ಬಳಿ ಗೋದಾಮಿನಲ್ಲಿ ಕಳುವಾಗಿದ್ದ ಡಿಎಪಿ ರಸಗೊಬ್ಬರ ಚೀಲಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಹಾಲಗಿಮರಡಿ ಗ್ರಾಮದ ನಾಗರಾಜ ಈರಣ್ಣ ಪಠಾತ(21), ಖಾನಾಪುರ ತಾಲೂಕಿನ ಲಕ್ಕೆಬೈಲ್ ಗ್ರಾಮದ ಪಂಡಿತ ಕಲ್ಲಪ್ಪ ಸನದಿ(37), ಮಂಜುನಾಥ ಸೋಮಪ್ಪ ಹಮ್ಮನ್ನವರ (30) ಹಾಗೂ ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದ ವಸಿಮ್ ಇಸ್ಮಾಯಿಲ್ ಮಕಾನದಾರ(23), ಹುದಲಿ ಗ್ರಾಮದ ಗಜಬರಲಿ ಗೌಸಮುದ್ದಿನ್ ಜಿಡ್ಡಿಮನಿ(39)ಎಂಬವರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಪೊಲೀಸರು 10.93 ಲಕ್ಷ ರೂ. ಮೌಲ್ಯದ ಆರ್‌ಸಿಎಫ್ ಕಂಪನಿಯ 810 ಡಿಎಪಿ ರಸಗೊಬ್ಬರ ಚೀಲಗಳೂ ಹಾಗೂ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
900 ಡಿಎಪಿ ರಸಗೊಬ್ಬರ ಚೀಲಗಳು ಕಳ್ಳತನ ಆಗಿರುವ ಬಗ್ಗೆ ಹೊನಗಾ ಗ್ರಾಮದ ಶಿವಾಜಿ ಬಾಳಾರಾಮ ಆನಂದಾಚೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದರು.