ಬೆಳಗಾವಿ- ಅಪ್ಪ ಎರಡು ದಶಕಗಳ ಕಾಲ ಜೀತ ಮಾಡಿ ಬೆಳೆಸಿದ ಮಗ ಪೈಲವಾನ್ ಈ ಪೈಲವಾನ್ ಈಗ ಜಗತ್ಪ್ರಸಿದ್ಧ, ಕಿರ್ಗಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಕುಸ್ತಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಿದಾಗ ಕುಸ್ತಿ ಅಭಿಮಾನಿಗಳು ಈ ಕುಸ್ತಿ ಪಟುಗೆ ಅದ್ಧೂರಿ ಸ್ವಾಗತ ನೀಡಿದ್ರು ಈ ಕುಸ್ತಿ ಪಟು ಮುಧೋಳದವರು.
ನಿಂಗಪ್ಪ ಗೆಣೆನ್ನವರ ಕಿರ್ಗಿಸ್ತಾನದಲ್ಲಿ ನಡೆದ 17 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಬುಧವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ 45 ಕೆ.ಜಿ. ಒಳಗಿನವರ ಫ್ರೀಸ್ಟೈಲ್ ವಿಭಾಗದಲ್ಲಿ ಅವರು ಪ್ರಥಮ ಸ್ಥಾನ ಗಳಿಸಿ ಗೆದ್ದರು.ಪ್ರಶಸ್ತಿ ಸುತ್ತಿನ ಬೌಟ್‌ನಲ್ಲಿ ನಿಂಗಪ್ಪ 10–7ರಿಂದ ಇರಾನ್ ದೇಶದ ಅಮೀರ್ ಮೊಹಮ್ಮದ್ ಸಲೆಹ ವಿರುದ್ಧ ಜಯಿ ಸಿದರು.ಮುಧೋಳದ ಜೈ ಹನುಮಾನ್ ವ್ಯಾಯಾಮ ಶಾಲೆಯ ಕುಸ್ತಿ ತರಬೇತುದಾರ ಪೈಲ್ವಾನ್ ಅರುಣ ಕುಮಕಾಳೆ ಅವರ ಬಳಿ 10ನೇ ವಯಸ್ಸಿನಿಂದ ತರಬೇತಿ ಪಡೆದಿದ್ದಾರೆ.