ಬೆಳಗಾವಿ- ಅಕ್ಟೋಬರ್ ತಿಂಗಳಲ್ಲಿ ಕಾಕತಿ ಗ್ರಾಮದಿಂದ ಬೆಳಗಾವಿಗೆ ಬರುತ್ತಿದ್ದ ರೇಶ್ಮಾ ಟಂ ಟಂ ಅಟೋ ಹತ್ತಿ ಬೆಳಗಾವಿಗೆ ಬರುವಾಗ ಆಕೆಯ ಪರ್ಸ ಕದ್ದ ಇಬ್ಬರು ಕಳ್ಳಿಯರನ್ನು ಪತ್ತೆ ಮಾಡುವಲ್ಲಿ ಖಡೇಬಝಾರ್ ಪೋಲೀಸರು ಯಶಸ್ವಿಯಾಗಿದ್ದಾರೆ
ರೇಶ್ಮಾ ಪರಶರಾಮ ದೇಸಾಯಿ ಅಕ್ಟೋಬರ್ ತಿಂಗಳಲ್ಲಿ ಕಾಕತಿ ಗ್ರಾಮದಿಂದ ಬೆಳಗಾವಿ ನಗರಕ್ಕೆ ಬರಲು ಟಂ ಟಂ ಹತ್ತಿದಾಗ ಇಬ್ಬರು ಮಹಿಳೆಯರು ಅವಳ ಜೊತೆ ಅಟೋ ಹತ್ತಿ ರೇಶ್ಮಾ ದೇಸಾಯಿಯ ಧ್ಯಾನ ತಪ್ಪಿಸಿ ಅವಳ ಪರ್ಸ ಕದ್ದು ಪರಾರಿಯಾಗುತ್ತಾರೆ
ಚನ್ನಮ್ಮ ವೃತ್ತದ ಗಣಪತಿ ಮಂದಿರದ ಬಳಿ ಇಳಿದ ರೇಶ್ಮಾ ಅಟೋ ಇಳಿದು ದುಡ್ಡು ಕೊಡಲು ಪರ್ಸ ನೋಡಿದಾಗ ಪರ್ಸ ಕಳುವಾದ ಅಂಶ ಬೆಳಕಿಗೆ ಬರುತ್ತದೆ ಪರ್ಸನಲ್ಲಿ ಇಂದು ಲಕ್ಷ ರೂ ಬೆಲೆ ಬಾಳುವ ಮಂಗಳಸೂತ್ರ ಕಳುವಾದ ಬಗ್ಗೆ ರೇಶ್ಮಾ ದೇಸಾಯಿ ಖಡೇಬಝಾರ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತಾಳೆ
ದೂರು ದಾಖಲಿಸಿ ತನಿಖೆ ಆರಂಭಿಸಿದ ಖಡೇಬಝಾರ್ ಪೋಲೀಸರು ಪರ್ಸ ಕದ್ದ ಕಾಕತಿ ಗ್ರಾಮದ ಸಿಂಪಲ್ ಮತ್ತು ಬಿನಾಬಾಯಿ ಲೋಂಡೆ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಟಂ ಟಂ ರಹಸ್ಯ ಭೇದಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ