Breaking News
Home / Breaking News / ಮೈತ್ರಿ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಸೆಡ್ಡು ಹೊಡೆಯಲಿರುವ ಬಿಜೆಪಿ …

ಮೈತ್ರಿ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಸೆಡ್ಡು ಹೊಡೆಯಲಿರುವ ಬಿಜೆಪಿ …

ಇಂದು ಸಾಯಂಕಾಲ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳ ಸಭೆ ಹಾಗೂ ೧೦ ಡಿಸೆಂಬರ್ ೨೦೧೮ ರಂದು ನಡೆಯಲಿರುವ ಬಿಜೆಪಿ ರೈತ ಸಮಾವೇಶ ಕುರಿತು ಚರ್ಚೆ ನಡೆಸಲಾಯಿತು.
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತ ಹಾಗೂ ಜನಪರ ವಿರೋಧ ಸರ್ಕಾರ ವಿರುವದರಿಂದ ಸದನದ ಒಳಗೆ ಹಾಗೂ ಹೊರಗೆ ಪ್ರಜಾತಾಂತ್ರಿಕ ಹೋರಾಟಕ್ಕೆ ಕರೆ ನೀಡಿದರು.
ಶಾಸಕರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹಾಗೂ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಅವರು ಜಿಲ್ಲೆಯ ಸಂಸದರು, ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಬಿಜೆಪಿ ರಾಜ್ಯ ಹಾಗೂ ಜಿಲ್ಲಾ ಪ್ರಮುಖ ಪದಾಧಿಕಾರಿಗಳೊಂದಿಗೆ ರಾಜ್ಯದ ಸೂಚನೆಯಂತೆ ರೈತರ ಸಾಲ ಮನ್ನಾ, ಬರಗಾಲ, ಕಬ್ಬು ಬೆಂಬಲ ಬೆಲೆ, ಬೆಳೆ ವಿಮೆ ಹಲವಾರು ‌ಸಮ‌ಸ್ಯೆಗಳ ಕುರಿತು
ಚರ್ಚಿಸಿ ಹೋರಾಟದ ರೂಪುರೇಷೆಗಳನ್ನು ನಿರ್ಣಯಿಸಿದರು.
ಸೋಮವಾರ 10 ಡಿಸೆಂಬರ್ 2018ರಂದು ಮದ್ಯಾಹ್ನ 12ಗಂಟೆಗೆ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರಾಜ್ಯ ಸರ್ಕಾರ ವಿರುದ್ಧ ಹೋರಾಟಕ್ಕಾಗಿ ಒಂದು ಲಕ್ಷ ರೈತರನ್ನು ಹಾಗೂ ಕಾರ್ಯಕರ್ತರನ್ನು ಸೇರಿಸಿ ಬಿಜೆಪಿ ರೈತ ಸಮಾವೇಶವನ್ನು ಬೆಳಗಾವಿಯ ಬಿ.ಎಸ್.ಯಡಿಯೂರಪ್ಪಾ ಮಾರ್ಗದಲ್ಲಿ (ಅಲಾರವಾಡ ಕ್ರಾಸ್ ) ಇರುವ “ಮಾಲಿನಿ ಸಿಟಿ” ಪರಿಸರದಲ್ಲಿ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಯಿತು.
ಮಾಜಿ ಸಚಿವರು ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಲಕ್ಷಣ ಸವದಿ, ಸಂಸದರಾದ ಸುರೇಶ ಅಂಗಡಿ ಹಾಗೂ ಪ್ರಭಾಕರ ಕೋರೆ ಅವರಿಗೆ ನೇತೃತ್ವ ವಹಿಸಲಾಯಿತು. ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರಿಗೆ ಹಾಗೂ ರಾಜ್ಯ ಮತ್ತು ಜಿಲ್ಲಾ ಕೆಲವು ಪ್ರಮುಖ ಪದಾಧಿಕಾರಿಗಳಿಗೆ ಸಮಾವೇಶದ ವಿವಿಧ ಜವಾಬ್ದಾರಿಗಳನ್ನು ನೀಡಲಾಯಿತು.
ಸಭೆಯಲ್ಲಿ ಮಹಾಂತೇಶ ಕವಟಗಿಮಠ MLC, ಶಾಸಕರಾದ ಅನಿಲ ಬೆನಕೆ, ಆನಂದ ಮಾಮನಿ, ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ, ಶಂಕರಗೌಡ ಪಾಟೀಲ, ಅಧ್ಯಕ್ಷರಾದ ವಿಶ್ವನಾಥ ಪಾಟೀಲ, ರಾಜೇಂದ್ರ ಹರಕುಣಿ , ರಾಜು ಚಿಕ್ಕನಗೌಡರ ಇತರರು ವೇದಿಕೆಯಲ್ಲಿದ್ದರು.

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *