ಬೆಳಗಾವಿ-ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ವಿಚಾರವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿಯಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು,ನಾವು ಈ ಬಾರಿ ಕಾನ್ಪಿಡೆಂಟ್ ಆಗಿ ಇದ್ದೇವೆ.ಎಂದು ಹೇಳಿದ್ದಾರೆ.
ಎಂಟು ತಿಂಗಳಲ್ಲಿ ಚುನಾವಣೆ ಬರ್ತಿದ್ದು, ಮೂರು ಪಕ್ಷಗಳಲ್ಲಿ ಚುನಾವಣೆ ತಯಾರಿ ನಡೆದಿದೆ,ನಾವು ಈ ಬಾರಿ ಕಾನ್ಪಿಡೆಂಟ್ ಆಗಿ ಇದ್ದೇವೆ.ಜನರಿಗೆ ತಿಳವಳಿಕೆ ಹೇಳ್ತೇವೆ, ಜನರನ್ನು ಒಲಿಸಿಕೊಳ್ಳುವ ವಿಶ್ವಾಸ ಕಾಂಗ್ರೆಸ್‌ನವರಿಗಿದೆ.ಇಡೀ ದೇಶದಲ್ಲಿ ಇವತ್ತು ಕಾಂಗ್ರೆಸ್‌ಗೆ ಕಷ್ಟದ ಸಂದರ್ಭ,ಇಂದಿರಾಗಾಂಧಿ ಕಷ್ಟದಲ್ಲಿ ಇದ್ದಾಗ, ಕಾಂಗ್ರೆಸ್ ಕಷ್ಟದಲ್ಲಿ ಇದ್ದಾಗ ಕರ್ನಾಟಕದಿಂದ ಕಾಂಗ್ರೆಸ್ ಪುಟಿದೇಳಿತು.ಅದೇ ರೀತಿ ಈ ಬಾರಿ ಕೂಡ ಕರ್ನಾಟಕದಿಂದ ಕಾಂಗ್ರೆಸ್ ಪುಟಿದೇಳುವ ಶಕ್ತಿ ಕೊಡಬೇಕು ಎಂದು ಹೆಬ್ಬಾಳಕರ ಮನವಿ ಮಾಡಿದ್ದಾರೆ.
ಸರ್ಕಾರ ರಚನೆ ಮಾಡಲೇಬೇಕು ಅಂತಾ ನಾವು ಪ್ರಯತ್ನ ಮಾಡ್ತಿದೀವಿ.ಸವದತ್ತಿಯಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ವಿಚಾರ,ಸವದತ್ತಿ ಕ್ಷೇತ್ರ ಆ್ಯಕ್ಚೂಯಲ್ ಆಗಿ ಕಾಂಗ್ರೆಸ್ ಕ್ಷೇತ್ರ,ಸವದತ್ತಿ ಕ್ಷೇತ್ರದಲ್ಲಿ ಗೆಲ್ಲಬೇಕು ಅನ್ನೋದು ನಮ್ಮೆಲ್ಲರ ಉದ್ದೇಶ.ಗೆಲ್ಲಿಸಬೇಕು ಅಂತಾ ಸತೀಶ್ ಜಾರಕಿಹೊಳಿ ಕೆಲಸ ಮಾಡ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ನಮ್ಮ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಭಾಗದಲ್ಲಿ ಕಾಂಗ್ರೆಸ್ ತಳಮಟ್ಟದಿಂದ ಕಟ್ಟುತ್ತಿದ್ದಾರೆ.ಸವದತ್ತಿಯಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ನನ್ನ ಗಮನಕ್ಕೆ ಬಂದಿಲ್ಲ, ನೋಡಬೇಕು,ಸವದತ್ತಿ ಕ್ಷೇತ್ರದಿಂದ ರಾಜ್ಯ ಕಾಂಗ್ರೆಸ್ ಪ್ರಭಾವಿ ನಾಯಕರ ಸ್ಪರ್ಧೆ ವಿಚಾರ,
ಅದು ನನ್ನ ಗಮನಕ್ಕೆ ಬಂದಿಲ್ಲ, ಇನ್ನೂ ಟೈಮ್ ಇದೆ.ಎಂದು
ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.