ಮಹಾರಾಷ್ಟ್ರ ರಾಜ್ಯಪಾಲರ ಆದೇಶದಂತೆ ನಾಳೆಯೇ ಉದ್ಧವ ಠಾಖ್ರೆ ಸರ್ಕಾರ ವಿಶ್ವಾಸಮತ ಯಾಚಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಇಂದು ಸಂಜೆ ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರದ ಬೆಳವಣಿಗೆಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ರಾಜ್ಯಪಾಲರ ಆದೇಶದಂತೆ ನಾಳೆಯೇ ವಿಶ್ವಾಸಮತವನ್ನು ಯಾಚಿಸಬೇಕು ಅದಕ್ಕೆ ತಡೆಯಾಜ್ಞೆ ನೀಡುವದಿಲ್ಲ ನಾಳೆಯೇ ಬೆಳಗ್ಗೆ 11-00 ಗಂಟೆಗೆ ವಿಶ್ವಾಸಮತ ಯಾಚನೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಶಿವಸೇನೆಯ 39 ಜನ ಭಿನ್ನಮತ ಶಾಸಕರು ಗುಹಾವಟಿಯಿಂದ ಗೋವಾಕ್ಕೆ ಪ್ರಯಾಣ ಬೆಳೆಸಿದ್ದು ಈ ಶಾಸಕರು ನಾಳೆ ಬೆಳಗ್ಗೆ 11-00 ಗಂಟೆಗೆ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಂಡು ಮಹಾ ಅಘಾಡಿ ಸರ್ಕಾರದ ವಿರುದ್ಧ ಶಿವಸೇನೆಯು ಭಿನ್ನಮತ ಶಾಸಕರು ಮತ ಚಲಾಯಿಸಲಿದ್ದು ಅದಕ್ಕಿಂತ ಮೊದಲು ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.