ದೂದ್ ಸಾಗರ್ ಬೆಳಗಾವಿಯಿಂದ ದೂರವಿಲ್ಲ…..!!!!
ಬೆಳಗಾವಿ- ಮಳೆ ಶುರುವಾದ್ರೆ ಸಾಕು ಬೆಳಗಾವಿ ಹುಡುಗರ ಮುಖದ ಮೇಲೆ ಹೊಸ ಕಳೆ ಬರುತ್ತೆ.ಯಾಕಂದ್ರೆ,ಜಿಟಿ..ಜಿಟಿ..ಮಳೆಯಲ್ಲಿ ಬೆಳಗಾವಿ ಸಿಟಿಯ ಜನ ಮಹಾರಾಷ್ಟ್ರದ ಗಡಿಯಲ್ಲಿರುವ ಅಂಬೋಲಿ,ಮತ್ತು ಗೋವಾ- ಕರ್ನಾಟಕದ ಗಡಿ ರೇಖೆಯಂತಿರುವ ದೂದ್ ಸಾಗರ್ ಟ್ರಿಪ್ ಮಾಡೇ ಮಾಡ್ತಾರೆ.ಇದು ಬೆಳಗಾವಿಯ ಮಾನ್ಸೂನ್ ಸ್ಪೇಶ್ಯಾಲಿಟಿ…
ಕೋವಿಡ್ ಸೊಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಗಡಿಯಾಚೆ ಕಾಲಿಡುವದು ಕಷ್ಟವಾಗಿತ್ತು. ಕೋವಿಡ್ ನಿಯಮಗಳು ಎರಡು ವರ್ಷದಿಂದ ಎಂಜಾಯ್ ಟ್ರಿಪ್ ಗೆ ಬ್ರೇಕ್ ಹಾಕಿದ್ದವು.ಆದ್ರೆ ಈ ವರ್ಷ ಬೆಳಗಾವಿಯ ಜನರಲ್ಲಿ ಹೊಸ ಉಲ್ಲಾಸ ಕಂಡು ಬಂದಿದೆ.ಮಳೆ ಶುರುವಾಗಿದ್ದೇ ತಡ,ಬೆಳಗಾವಿಯ ಹುಡುಗರು,ಹುಡಗಿಯರು ಈಗ ಪಕ್ಕದ ಅಂಬೋಲಿ,ಮತ್ತು ದೂದ್ ಸಾಗರ್ ಗೆ ಟ್ರಿಪ್ ಶುರು ಮಾಡಿದ್ದಾರೆ.
ದೇಶಿ ಮತ್ತು ವಿದೇಶಿ ಪ್ರವಾಸಿಗರ ಪಾಲಿನ ಸ್ವರ್ಗ ಎಂದೆನಿಸಿಕೊಂಡಿರುವ ಗೋವಾದಲ್ಲಿ ಕೇವಲ ಕಡಲ ಕಿನಾರೆಗಳು, ಪುರಾತನ ಚರ್ಚ್‍ಗಳು ಮತ್ತು ಸಮುದ್ರ ಆಹಾರ, ಸ್ಥಳೀಯ ವೈನ್ ಮಾತ್ರ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ ಎಂದು ನೀವು ಭಾವಿಸಿದ್ದರೆ, ನಿಮ್ಮ ಆಲೋಚನೆ ಖಂಡಿತಾ ತಪ್ಪು. ಗೋವಾದಲ್ಲಿ ಸುಂದರ, ಅತ್ಯಾಕರ್ಷಕ ಜಲಪಾತಗಳು ಕೂಡ ಇವೆ.
ದೂಧ್ ಸಾಗರ್ ಜಲಪಾತ ಅವುಗಳಲ್ಲಿ ಒಂದು. ದೇಶದ ಅತ್ಯಂತ ಎತ್ತರದ ಜಲಪಾತಗಳ ಪೈಕಿ ಒಂದೆಂದು ಹೆಸರುವಾಸಿ ಆಗಿರುವ ಈ ಜಲಪಾತ, ಚಾರಣಕ್ಕೆ ಸೂಕ್ತವಾದ ಜಾಗವೆಂದು ಖ್ಯಾತವಾಗಿದೆ. ದೂಧ್ ಸಾಗರ್ ಜಲಪಾದ ಹಾದಿಯುದ್ದಕ್ಕೂ, ಶ್ರೀಮಂತ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು, ಅದ್ಭುತ ದೃಶ್ಯಾವಳಿಗಳನ್ನು ಮತ್ತು ಹಳೆಯ ರೈಲ್ವೇ ಟ್ರ್ಯಾಕ್ ಹೊಂದಿರುವುದನ್ನು ಕಾಣಬಹುದು.
ಮೂರು ತೊರೆಗಳು, ನಾಲ್ಕು ಹಂತವುಳ್ಳ ಈ ದೂಧ್ ಸಾಗರ ಜಲಪಾತ 600 ಮೀಟರ್ ಎತ್ತರವನ್ನು ಹೊಂದಿದೆ. ಮಳೆಗಾಲದ ಋತುವಿನಲ್ಲಂತೂ ಹಚ್ಚ ಹಸಿರಿನಿಂದ ತುಂಬಿದ ಇಲ್ಲಿನ ಪ್ರಕೃತಿ ಸೌಂದರ್ಯವು ಇಮ್ಮಡಿಯಾಗಿ, ಪ್ರವಾಸಿಗರಿಗೆ ವಿಶೇಷ ಆನಂದವನ್ನು ನೀಡುತ್ತದೆ.
ನೀವೂ ಕೂಡಾ ಅಂಬೋಲಿ ಅಥವಾ ದೂದ್ ಸಾಗರ್ ಗೆ ಜ್ವಾಲಿ ಟ್ರಿಪ್ ಮಾಡಲು ತಯಾರಾಗಿ,ಕುಟುಂಬ ಸಮೇತ ಎರಡೂ ನಿಸರ್ಗದ ಸ್ವರ್ಗಗಳ ಸೌಂಧರ್ಯ ನೋಡಿ,ಎಂಜಾಯ್…
ಹ್ಯಾಪಿ ಜರ್ನಿ….