ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್, ಗ್ಯಾಸ್ ನೀಡಿದ್ದಾರೆ.
ಈಚೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಕೇಂದ್ರ ಸಚಿವ ಸೋಮಪ್ರಕಾಶ, ಬಾಯವ್ವ ಅವರ ಮನೆಗೆ ಹೋಗಿ ಊಟ ಮಾಡಿದ್ದರು. ಗ್ಯಾಸ್ ಇಲ್ಲದ್ದರಿಂದ ಒಲೆ ಮೇಲೆ ಅಜ್ಜಿ ಅಡುಗೆ ಮಾಡಿದ ಬಗ್ಗೆ ಮಾಧ್ಯಮಗಳು ಗಮನಸೆಳೆದಿದ್ದವು. ಈ ವಿದ್ಯಮಾನ ಸ್ವತಃ ಬಿಜೆಪಿ ನಾಯಕರಿಗೂ ಮುಜುಗರ ತರಿಸಿತ್ತು.
ಹಾಗಾಗಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್, ಗ್ಯಾಸ್ ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ