ಬೆಳಗಾವಿ- ಡಾ.ಬೋರಲಿಂಗಯ್ಯ ಅವರು ಪೋಲೀಸ್ ಆಯುಕ್ತರಾಗಿ ಬಂದ ನಂತರ ಬೆಳಗಾವಿ ಮಹಾನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ತ್ವರಿತಗತಿಯಲ್ಲಿ ವಿಚಾರಣೆ ಆಗುತ್ತಿವೆ.
ಇತ್ತೀಚಿಗೆ ಬೆಳಗಾವಿ ಮಹಾನಗರದ ಉದ್ಯಮಬಾಗ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಜಗಾವಿ ಗ್ರಾಮದ
ಯಲ್ಲೇಶ್ ಶಿವಾಜಿ ಕೋಲ್ಕರ್ 27 ಎಂಬಾತನನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ ಉದ್ಯಮಬಾಗ ಠಾಣೆಯ ಸಿಪಿಐ ಧೀರಜ್ ಶಿಂಧೆ ಈ ಕೊಲೆ ಪ್ರಕರಣವನ್ನು ಬಹುತೇಕ ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿರುವ ಉದ್ಯಮಬಾಗ ಪೋಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಉದ್ಯಮಬಾಗ ಪ್ರದೇಶದಲ್ಲಿ ನಡೆದ ಯುವಕನ ಕೊಲೆಗೆ ಅನೈತಿಕ ಸಂಭಂಧವೇ ಕಾರಣ ಎಂದು ಹೇಳಲಾಗುತ್ತಿದ್ದು. ಪೋಲೀಸರ ವಿಚಾರಣೆ ಮುಗಿದ ಬಳಿಕ ಕಾರಣ ಸ್ಪಷ್ಟವಾಗಲಿದೆ.ಈ ಪ್ರಕರಣದಲ್ಲಿ ಕೊಲೆಯಾದ ಯುವಕ ಯಲ್ಲೇಶ್ , ಪರಿಚಯಸ್ತರೇ ಶಾಮೀಲಾಗಿದ್ದಾರೆ.ಎಂದು ಹೇಳಲಾಗುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ