ಬೆಳಗಾವಿ ನಗರದಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಎರಡು ಕಡೆ ಅಪಘಾತ ಸಂಭವಿಸಿದೆ.ಬೆಳಗಾವಿ ನಗರದ ಬಸವೇಶ್ವರ ಸರ್ಕಲ್ ಬಳಿ ಕಾರು ಹಾಯ್ದು ಕಸಗೂಡಿಸುತ್ತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು. ಸಮೀಪದ ಹೊನ್ಯಾಳ ಬಳಿ ಟ್ರಕ್ ಪಾದಚಾರಿಯ ಮೇಲೆ ಹರಿದು ವ್ಯಕ್ತಿಯೊಬ್ನನ ಎರಡೂ ಕಾಲುಗಳು ನುಜ್ಜಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕಾರು ಹಾಯ್ದು ಮಹಿಳೆ ಸಾವು…..
ಬೆಳಗಾವಿ-ಬಸವೇಶ್ವರ ವೃತ್ತದ ಬಳಿ ಇರುವ ಎಲ್ಐಸಿ ಕಚೇರಿಯ ಆವರಣದಲ್ಲಿ ಕಸಗುಡಿಸುತ್ತಿದ್ದ ಮಹಿಳೆಯ ಮೇಲೆ ಕಾರು ಚಲಾಯಿಸಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಟಿಳಕವಾಡಿಯ ಪಿ.ಕೆ.ಕ್ವಾರ್ಟಸ್ ನಲ್ಲಿರುವ ಅನಿತಾ ರಾಜೇಶ ಬನ್ಸ್ (52) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಎಂದಿನಂತೆ ಎಲ್ ಐಸಿ ಕಚೇರಿ ಆವರಣ ಶುಚಿಗೊಳಿಸುತ್ತಿದ್ದ ಅನಿತಾ ಇಂದು ಕಸ ಗೂಡಿಸಲು ಆಗಮಿಸಿದ್ದಾಳೆ. ಕಸ ಗುಡಿಸುವ ವೇಳೆ ಎಲ್ ಐಸಿ ಆವರಣದಿಂದ ಕಾರು ಹೊರಗಡೆ ತಗೆಯುವಾಗ ಕಾರ್ ಚಾಲನೆ ಮಾಡುತ್ತಿದ್ದ ಗುರುರಾಜ ಕುಲಕರ್ಣಿ ಕಸಗುಡಿಸುತ್ತಿದ್ದ ಅನಿತಾಗೆ ಗುದ್ದಿದ್ದಾನೆ. ಕಾರ್ ಗುದ್ದಿದ ರಬಸಕ್ಕೆ ಅನಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಅನಿತಾ ಕುಟುಂಬಸ್ಥರು ಹಾಗೂ ಸ್ಥಳೀಯರು ಕಾರ್ ಚಾಲನೆ ಮಾಡುತ್ತಿದ್ದ ಕುಲಕರ್ಣಿಗೆ ಹಿಗ್ಗಾಮುಗ್ಗಾ ಥಳಿಸಿದರು. ಸ್ಥಳಕ್ಕೆ ಟಿಳಕವಾಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಆ್ಯಕ್ಸೀಡೆಂಟ್….@ ಹೊನ್ಯಾಳ.. belagavi
ಬೆಳಗಾವಿ -ಬಾಗಲಕೋಟೆ ಮುಖ್ಯ ರಸ್ತೆಯ ಬೆಳಗಾವಿ ತಾಲೂಕಿನ ಬಾಳೆಕುಂದ್ರಿ -ಹೊನ್ನಿಹಾಳ ಗ್ರಾಮಗಳ ಮಧ್ಯೆ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಮಾವಿನಕಟ್ಟಿ ಗ್ರಾಮದ ಮಹಾಂತೇಶ ಸನದಿ ವಯಸ್ಸು 35ರ ಆಸುಪಾಸು ಎಂದು ಗೊತ್ತಾಗಿದೆ.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಎರಡು ಕಾಲುಗಳು ನುಜ್ಜಾಗಿದ್ದು,ಮಾರೀಹಾಳ ಠಾಣೆ ಪೋಲೀಸರು ಅಂಬುಲೆನ್ಸ್ ನಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಿಸಿದ್ದಾರೆ.