ಮಹಾರಾಷ್ಟ್ರದಲ್ಲಿ ಮಹಾಮಳೆ, ಬೆಳಗಾವಿಯಲ್ಲಿ ಆತಂಕ
ಬೆಳಗಾವಿ- ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟದಲ್ಲಿ ಭಯಂಕರ ಮಳೆ ಸುರಿಯುತ್ತಿರುವ ಪರಿಣಾಮ,ಮಹಾರಾಷ್ಟ್ರದ ಪಂಚಗಂಗಾ ನದಿ ಅಪಾಯ ಮಟ್ಟದಲ್ಲಿ ಹರಿತುತ್ತಿದ್ದು ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಮಹಾರಾಷ್ಟ್ರದ ಪಂಚಗಂಗಾ ನದಿ,ಕೃಷ್ಣಾ ನದಿಗೆ ಸೇರುತ್ತದೆ.ಪಂಚಗಂಗಾ ನದಿಗೆ ಮಹಾಪೂರ ಬಂದಿರುವ ಕಾರಣ,ಕೃಷ್ಣಾ ನದಿಯ ಒಳಹರಿವು ಹೆಚ್ಚಾಗಿದೆ.ಕೃಷ್ಣಾ ನದಿಗೆ 71 ಸಾವಿರ,293 ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ.
ರಾಜಾಪೂರ ಬ್ಯಾರೇಜಿನಿಂದ,56.33 ಸಾವಿರ ಕ್ಯಸೆಕ್ಸ್,ದೂದಗಂಗಾ 14.960 ಕ್ಯುಸೆಕ್ಸ್, ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿಯುತ್ತಿರುವದರಿಂದ ಘಟಪ್ರಭಾ ನದಿಯ ಒಳಹರಿವು ಹೆಚ್ಚಾಗಿದೆ. ಘಟಪ್ರಭಾ ನದಿಯ ಒಳಹರಿವು ಹೆಚ್ಚಾದ ಕಾರಣ,24 ಗಂಟೆಯೊಳಗಾಗಿ ಹಿಡಕಲ್ ಡ್ಯಾಂ ನಲ್ಲಿ ನೀರಿನ ಮಟ್ಟ 4 ಫೀಟ್ ಹೆಚ್ಚಾಗಿದೆ.
ಕೃಷ್ಣಾ ನದಿಯ ಒಳಹರಿವು ಏರಿಕೆಯಾಗಿದ್ದರಿಂದ,ಮಲ್ಲಿಕವಾಡ,ದತ್ತವಾಡ,ಕಲ್ಲೋಳ,ಯಡೂರ,ಕಾರಜಗಾ,ಭೋಜವಾಡಿ,ಕುನ್ನೂರ ಸೇತುವೆಗಳು ಮುಳುಗಡೆಯಾಗಿವೆ.ಪೋಲೀಸರು ಮುಳುಗಡೆಯಾಗಿರುವ ಸೇತುವೆಗಳ ಬಳಿ,ಬ್ಯಾರಿಕೇಡ್ ಹಚ್ವಿ ಸೇತುವೆ ಮೇಲ್ಗಡೆಯಿಂದ ಸಂಚಾರ ಮಾಡದಂತೆ ಸಾರ್ವಜನಿಕರನ್ನು ತಡೆಯುತ್ತಿದ್ದಾರೆ.
ಪರಿಸ್ಥಿತಿ ನಿರ್ವಹಣೆಗೆ ಸಚಿವ ಕಾರಜೋಳ ಸೂಚನೆ….
ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಬೆಳಗಾವಿಯಲ್ಲಿ ಪ್ರವಾಹದ ಪರಿಸ್ಥಿತಿಯನ್ನು ನಿರ್ವಹಿಸುವಂತೆ,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿ ಟ್ವೀಟ್ ಮಾಡಿದ್ದಾರೆ.
ಬೆಳಗಾವಿ ಅಧಿಕಾರಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್…
ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು ಬೆಳಗಾವಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ. ಗಡಿಯಲ್ಲಿ ಎದುರಾಗಲಿರುವ ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈಗ ಬೆಳಗಾವಿ ಜಿಲ್ಲಾಧಿಕಾರಿ,ಪೋಲೀಸ್ ವರಿಷ್ಠಾಧಿಕಾರಿ,ನಗರ ಪೋಲೀಸ್ ಆಯುಕ್ತರು ಸೇರಿದಂತೆ ಬೆಳಗಾವಿಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದು,ಸೂಕ್ತ ನಿರ್ದೇಶನಗಳನ್ನು ನೀಡುತ್ತಿದ್ದು ವಿಡಿಯೋ ಕಾನ್ಫರೆನ್ಸ್ ಈಗಲೂ ನಡೆಯುತ್ತಿದೆ.