ಬೆಳಗಾವಿ: ನಾಪತ್ತೆ ಆಗಿದ್ದ ಮರಾಠಾ ಲಘು ಪದಾತಿ ದಳದ ಕಮಾಂಡೋ ಟ್ರೈನಿಂಗ್ ವಿಂಗ್ ನ ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ, ಒಂದು ತಿಂಗಳ ಬಳಿಕ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರು ನಾಪತ್ತೆ ಆಗಿದ್ದರಿಂದ ಸೇನಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು ಮತ್ತು ಸೇನೆಯ ಅಧಿಕಾರಿಗಳು ಶ್ರಮವಹಿಸಿ ಸೇನಾ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥ ಸ್ಥಿತಿಯಲ್ಲಿ ಸೇನಾಧಿಕಾರಿ ಶುಕ್ರವಾರ ಸಿಕ್ಕಿ ಬಿದ್ದಿದ್ದಾರೆ.
ಕ್ಯಾಂಪ್‌ಪ್ರದೇಶದಿಂದ ಕಳೆದ ತಿಂಗಳು 12ರಂದು ಮಧ್ಯಾಹ್ನ ಸುರ್ಜಿತಸಿಂಗ್ ನಾಪತ್ತೆ ಆಗಿದ್ದರು. ಎಟಿಎಂ ನಿಂದ ಹಣ ಪಡೆಯಲು ಹೋದವರು ಮರಳಿ ಬಂದಿರಲಿಲ್ಲ.ಮೊಬೈಲ್ ಟ್ರೆಸ್ ಮಾಡಿದರೂ ಸಿಕ್ಕಿರಲಿಲ್ಲ. ಸೇನಾಧಿಕಾರಿಯನ್ನು ಯಾರಾದರೂ ಅಪಹರಣ ಮಾಡಿದ್ದಾರೆಯೇ ಎಂಬ ಅನುಮಾನ ಇತ್ತು.
ಖಿನ್ನತೆ ಗೆ ಒಳಗಾಗಿರುವ ಸುರ್ಜೀತಸಿಂಗ್ ಅವರಿಗೆ ಹಿಂದಿನದ್ದು ಏನೂ ನೆನಪಿಲ್ಲ. ಹೀಗಾಗಿ ಅಲ್ಲಿ, ಇಲ್ಲಿ ಅಲೆದಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಇದ್ದಾಗ ಪೊಲೀಸರ ಕಣ್ಣಿಗೆ ಬಿದ್ದಾಗ ಹಿಡಿದು ವಿಚಾರಣೆ ನಡೆಸಿದಾಗ ಪತ್ತೆ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ