ಗೋಕಾಕ- ಗೋಕಾಕ್ ಫಾಲ್ಸ್ ದಲ್ಲಿ ಅಪಾಯದ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆಯಲು ಹೋಗಿ,ನಿಯಂತ್ರಣ ತಪ್ಪಿ ಅದೆಷ್ಡು ಜನ ಜಲ ಸಮಾಧಿ ಆಗಿದ್ದಾರೆ ಅದಕ್ಕೆ ಲೆಕ್ಕವೇ ಇಲ್ಲ.ಇಷ್ಟೆಲ್ಲಾ ಅನಾಹುತಗಳು ಇಲ್ಲಿ ಪ್ರತಿವರ್ಷ ಸಂಭವಿಸಿದರೂ.ಜನರ ಹುಚ್ಚಾಟ ಮಾತ್ರ ನಿಂತಿಲ್ಲ.
ಫಾಲ್ಸ್ ಸುತ್ತಲು ಜನರ ರಕ್ಷಣೆಗೆ ಯಾವುದೇ ರೀತಿಯ ಸವಲತ್ತುಗಳು ಇಲ್ಲ.ಅಪಾಯದ ಸ್ಥಳಕ್ಕೆ ಹೋಗದಂತೆ ಪ್ರವಾಸಿಗರನ್ನು ತಡೆಯಲು ಪೋಲೀಸರ ಕಾವಲು ಕೂಡಾ ಇಲ್ಲ.ಹೀಗಾಗಿ ಇಲ್ಲಿ ಬರುವ ಪ್ರವಾಸಿಗರ ಮೇಲೆ ನಿಯಂತ್ರಣ ಇಲ್ಲವೇ ಇಲ್ಲ.ಅದಕ್ಕಾಗಿ ಅಪಾಯದ ಸ್ಥಳಕ್ಕೆ ಹೋಗಿ ಸೆಲ್ಫಿ ತೆಗೆಯುವ ಹುಚ್ಚಾಟ ಮುಂದುವರೆದಿದೆ.
ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದು ಅಪಾಯವನ್ನು ಲೆಕ್ಕಿಸದೇ ಜಲಪಾತದ ತುತ್ತತುದಿಗೆ ತೆರಳಿ ಫೋಟೋ,ಸೆಲ್ಪಿಗೆ ಕ್ಲಿಕ್ಕಿಸಿಕೊಳ್ಳಲು ಮುಗಿಬಿಳ್ಳುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ನಗರದ ಹೊರವಲಯದಲ್ಲಿರುವ ಜಲಪಾತದಲ್ಲಿ ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ.ಕಳೆದ ಒಂದು ವಾರಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶ ಮತ್ತು ಬೆಳಗಾವಿಯಲ್ಲಿ ಆಗುತ್ತಿರುವ ಮಳೆಯಿಂದ ಗೋಕಾಕ್ ಜಲಪಾತ ಹಾಲಿನ್ನೊರೆಯಂತೆ ಮೈದುಂಬಿ ಧುಮ್ಮುಕ್ಕುತ್ತಿದ್ದು 180ಅಡಿ ಎತ್ತರದಿಂದ ಧುಮುಕುತ್ತಿರುವ ಜಲಧಾರೆ ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಇತ್ತ ಅಪಾಯವನ್ನು ಲೆಕ್ಕಿಸದೇ ಪ್ರವಾಸಿಗರು ಜಲಪಾತದ ತುತ್ತತುದಿಗೆ ತೆರಳಿ ಫೋಟೋ,ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿಳ್ಳುತ್ತಿದ್ದಾರೆ. ಕೆಲವರು ಜಲಪಾತದ ಮೇಲಿನ ಬಂಡೆಗಳ ಮೇಲೆ ನಿಂತು ಫೋಟೋಗೆ ಪೋಸ್ ಕೊಡುತ್ತಿದ್ದು ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಏನಾದರೂ ಅನಾಹುತ ಸಂಭವಿಸುವ ಮೊದಲೇ ಗೋಕಾಕ್ ತಾಲೂಕಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.