ಕುಡಚಿ ಕ್ಷೇತ್ರದ ವಶಕ್ಕಾಗಿ,ಸೈಕಲ್ ಹತ್ತಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್….!!
ಬೆಳಗಾವಿ-18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ,ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಬಿಜೆಪಿ ಶಾಸಕರು ಗೆದ್ದಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟು, ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ.
ಎಂಎಲ್ಸಿ ಚುನಾವಣೆಯಲ್ಲಿ,ಚನ್ನರಾಜ್ ಹಟ್ಟಿಹೊಳಿ,ಮತ್ತು ಪ್ರಕಾಶ್ ಹುಕ್ಕೇರಿ ಗೆದ್ದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಎನರ್ಜಿ ಹೆಚ್ಚಾಗಿದ್ದು ವಿಧಾನ ಪರಿಷತ್ತು ಸದಸ್ಯ ಚನ್ನರಾಜ ಹಟ್ಟಿಹೊಳಿ ಇಂದಿನಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ಕುಡಚಿ ಕ್ಷೇತ್ರದಲ್ಲಿ ಆಪರೇಷನ್ ಶುರು ಮಾಡಿದ್ದಾರೆ.
ರಾಯಬಾಗ ಕುಡಚಿ ಕ್ಷೇತ್ರದಿಂದ ಬಿಜೆಪಿಯ ಪಿ. ರಾಜೀವ ಶಾಸಕರಾಗಿದ್ದಾರೆ.ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದ ಶ್ಯಾಮ್ ಘಾಟಗೆ ,ಮತ್ತು ಅವರ ಪುತ್ರ ಪರಾಭವಗೊಂಡಿದ್ದರು. ಆದ್ರೆ ಈ ಕ್ಷೇತ್ರಕ್ಕೆ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಎಂಟ್ರಿ ಕೊಟ್ಟಿದ್ದು.ಈ ಕ್ಷೇತ್ರದ ಯರಬಟ್ಟಿ ಗ್ರಾಮದಲ್ಲಿ ಚನ್ನರಾಜ್ ಸೈಕ್ಲಿಂಗ್ ಮಾಡುವ ಮೂಲಕ ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಿಷ್ಠಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ ರಾಯಬಾಗ ಕುಡಚಿ ಕ್ಷೇತ್ರದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸೈಕ್ಲೀಂಗ್ ಮಾಡಿ,ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಆಗಿರುವ ಸಾಧನೆಗಳ ಪ್ರಚಾರಕ್ಕಾಗಿ ಸೈಕ್ಲಿಂಗ್ ಮಾಡುತ್ತಿರುವದಾಗಿ ಚನ್ನರಾಜ್ ಹೇಳಿಕೊಂಡಿದ್ದಾರೆ.
ಕುಡಚಿ ಕ್ಷೇತ್ರದಲ್ಲಿ ಇಂದು ಎಂಎಲ್ಸಿ ಚನ್ನರಾಜ್ ನಡೆಸಿದ ಸೈಕ್ಲೀಂಗ್,ಬಿಜೆಪಿ ಅಷ್ಟೇ ಅಲ್ಲ,ಕಾಂಗ್ರೆಸ್ ಪಕ್ಷದಲ್ಲೂ ಚರ್ಚೆಗೆ ಕಾರಣವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸವದತ್ತಿ ಕ್ಷೇತ್ರದಲ್ಲಿ ಆಪರೇಷನ್ ಶುರು ಮಾಡಿದ್ದು,ಚನ್ನರಾಜ್ ಕುಡಚಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಯಾವ ಕ್ಷೇತ್ರದಲ್ಲಿ ಕೈ ಆಪರೇಷನ್ ಶುರು ಮಾಡ್ತಾರೆ ಅನ್ನೋದು ಎಲ್ಲರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿರುವ ಕಾಂಗ್ರೆಸ್ ವರ್ಷ ಮೊದಲೇ ಹಂಟಿಂಗ್ ಆರಂಭಿಸಿದೆ.
ಇಂದು ಕುಡಚಿ ಕ್ಷೇತ್ರದಲ್ಲಿ ಚನ್ನರಾಜ್ ನಡೆಸಿದ ಸೈಕ್ಲಿಂಗ್ ಹೈ- ಲೇವಲ್ ಪಾಲಿಟೀಕ್ಸ್ ಗೆ ದಿಕ್ಸೂಚಿ ಆಗೋದು ಗ್ಯಾರಂಟಿ..