ನಾಲ್ಕು ಜನರ ಜೀವ ಉಳಿಸಿದ,ಯುವತಿಯ ಪಾಲಕರಿಗೆ ಸಲಾಂ…

ಧಾರವಾಡದ ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ 15 ವರ್ಷದ ಬಾಲಕಿ ತನ್ನ ಅಂಗಾಂಗಳನ್ನು ದಾನ ಮಾಡಿ 4 ಜನರ ಜೀವ ಉಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾಳೆ.

ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಗ್ರೀನ ಕಾರಿಡಾರ ಮೂಲಕ ಧಾರವಾಡದಿಂದ ರಸ್ತೆ ಮೂಲಕ ತೆಗೆದುಕೊಂಡು ಬರಲಾಯಿತು. ಒಂದು ಕಿಡ್ನಿಯನ್ನು ಎಸಡಿಎಂ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ತತ್ವಾದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಕಸಿ ಮಾಡಿದರೆ, ಲೀವರ ಅನ್ನು ಬೆಂಗಳೂರಿನ‌ ಶೇಷಾದ್ರಿಪುರಂನ ಅಪೊಲೊ ಆಸ್ಪತ್ರೆಗೆ ಏರ ಮೂಲಕ ಕಳುಹಿಸಿಕೊಟ್ಟರು. ಪೊಲೀಸರು ಸಂಪೂರ್ಣವಾಗಿ ಜೀರೋ ಟ್ರಾಫಿಕ್ ಅಥವಾ ಗ್ರೀನ ಕಾರಿಡಾರ (ಹಸಿರು ಪಥ) ಮೂಲಕ ಅಂಗಾಂಗಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.

ಮೆದಳು ನಿಷ್ಕ್ರಿಯಗೊಂಡಿದ್ದರೂ ಕೂಡ ಅಂಗಾಂಗಳು ಕಾರ‍್ಯನಿರ್ವಹಿಸುತ್ತಿದ್ದವು. ಮೆದುಳು ನಿಷ್ಕ್ರಿಯಗೊಂಡ ಬಾಲಕಿಯ ತಂದೆ ತಾಯಿ, ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನಿಮ್ಮ ಬಾಲಕಿ ನೀಡುವ ಅಂಗಾಂಗ ಇನ್ನೊಬ್ಬರ ಜೀವ ಉಳಿಸುತ್ತದೆ ಎಂದು ಹೇಳಿದಾಗ, ಸ್ವಇಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು.

ಮೆದುಳು ನಿಷ್ಕ್ರೀಯಗೊಂಡ ಬಾಲಕಿಯ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗೋಕಾಕ ತಾಲೂಕಿನ 22 ಯುವಕನಿಗೆ ಕಸಿ ಮಾಡುವಲ್ಲಿ ಡಾ.ರಿಚರ್ಡ ಸಾಲ್ಡಾನಾ, ಡಾ. ಮೋಹನ ಗಾನ, ಡಾ. ಆನಂದ ವಾಘರಾಳಿ ಮತ್ತು ಅವರ ತಂಡವು ನಿರತರಾದರು. ಮೃತಪಟ್ಟರೂ ಕೂಡ 4 ಜನರ ಜೀವ ಉಳಿಸಿದ ಸಾರ್ಥಕತೆ ಮೆರೆದ ಬಾಲಕಿ. ಬೆಳಗಾವಿ ಹಾಗೂ ಹುಬ್ಬಳ್ಳಿ ಪೊಲೀಸ ಇಲಾಖೆಯ ಕಾರ್ರ್ಯ ಅತ್ಯಂತ ಶ್ಲಾಘನೀಯವಾದ್ದು. ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಗ್ರೀನ್ ಕಾರಿಡಾರ ನಿರ್ಮಿಸಿ ಅಂಗಾಂಗಳನ್ನು ಶೀಘ್ರ ಸ್ಥಳಾಂತರಿಸಲು ತೀವ್ರವಾದ ಮಳೆಯಲ್ಲಿಯೇ ನೆನೆಯುತ್ತ ಅವಕಾಶ ಕಲ್ಪಿಸಿಕೊಟ್ಟರು.

ಅಂಗಾಂಗಳನ್ನು ದಾನ ಮಾಡಿದ ಬಾಲಕಿ ಹಾಗೂ ಅವಳ ಕುಟುಂಬ ಸದಸ್ಯರು, ಪೋಲಿಸರ ಕಾರ‍್ಯವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ,ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *