ಬೆಳಗಾವಿ- ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಉಕ್ಕಿ ಹರಿತುತ್ತಿವೆ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ,ಜಿಪಂ ಸಿಇಓ ದರ್ಶನ್ ಸೇರಿದಂತೆ ಇಡೀ ಬೆಳಗಾವಿ ಜಿಲ್ಲಾಡಳಿತ ಇಂದು ಬೆಳಗ್ಗೆ ಕೃಷ್ಣಾ ನದಿತೀರದಲ್ಲಿ ಸಂಚರಿಸಿ ಪರಿಸ್ಥಿತಿಯ ಅವಲೋಕನ ಮಾಡಿತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಿಭಾಗದಲ್ಲಿ ತುಂಬಿ ಹರಿಯುತ್ತಿರುವ ದೂದಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿಗಳು ಅಪಾಯದ ಮಟ್ಟ ತಲುಪಿವೆ, ಕೃಷ್ಣಾ ನದಿಯ ಒಳ ಹರಿವು ಒಂದು ಲಕ್ಷ ಕ್ಯುಸೆಕ್ಸ್ ಗಿಂತ ಹೆಚ್ಚಾಗಿದೆ.
ಕೃಷ್ಣಾ ನದಿ ಪಾತ್ರದ ಪ್ರವಾಹ ಸಂಭಾವ್ಯ ಪ್ರದೇಶಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಂದು ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದಾಗಿ ಪರಶೀಲನೆ ಮಾಡಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ, ಕಲ್ಲೋಳ, ಮಾಂಜರಿ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಈ ಭಾಗದ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.ಕೃಷ್ಣಾ ನದಿ ಪ್ರವಾಹ ಉಂಟಾಗಬಹುದಾದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೃಷ್ಣಾ ನದಿಗೆ ಅಡ್ಡಲಾಗಿರುವ ಮಾಂಜರಿ ಸೇತುವೆ ಸೇರಿದಂತೆ ಕಾಳಜಿ ಕೇಂದ್ರ ಪರಿಶೀಲನೆ ಮಾಡಲಾಯಿತು.
ಪ್ರವಾಹ ಪರಸ್ಥಿತಿ ಸಧ್ಯಕ್ಕಿಲ್ಲ, ಅಪಾಯಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಪ್ರವಾಹ ಪರಸ್ಥಿತಿ ಉಂಟಾಗಬಹುದಾದ ಹಿನ್ನಲೆ ಕಾಳಜಿಕೇಂದ್ರ ಗುರುತಿಸಲಾಗಿದೆ.NDRF ತಂಡ ನಿಯೋಜನೆ ಮಾಡಲಾಗಿದೆ.ಬೆಳಗಾವಿ ಜಿಲ್ಲೆಯಾದ್ಯಂತ 317 ಮನೆಗಳಿಗೆ ಹಾನಿಯಾಗಿದೆ.ಈ ಹಿಂದೆ ಪ್ರವಾಹದಿಂದ ಮನೆ ಹಾನಿಯಾದವರಿಗೆ ಅಕೌಂಟ್ ಗೆ ದುಡ್ಡು ಹಾಕಲಾಗಿದೆ.ಪ್ರವಾಹ ಪರಿಸ್ಥಿತಿ ಬಗ್ಗೆ ಮುಂಜಾಗ್ರತಾ ಕ್ರಮವಹಿಸಲಾಗಿದೆ.ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾದ್ಯಮಗಳಿಗೆ ಮಾಹಿತಿ ನೀಡಿದ್ರು.