ಆಹಾರ ಧಾನ್ಯಗಳಿಗೆ ಶೇ.5 GST ವಿಧಿಸಿರುವ ಕೇಂದ್ರ ಸರಕಾರದ ನಡೆಗೆ ಆಕ್ರೋಶ
ಬೆಳಗಾವಿ: ಆಹಾರ ಧಾನ್ಯ ಹಾಗೂ ಬೇಳೆಕಾಳುಗಳ ಮೇಲೆ ಕೇಂದ್ರ ಸರಕಾರ ಶೇ.5ರಷ್ಟು ಸೇವಾ ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಿರುವುದನ್ನು ಖಂಡಿಸಿ ನಗರದ ರವಿವಾರಪೇಟೆಯ ಎಲ್ಲ ವರ್ತಕರು ಜು.16ರಂದು ಒಂದು ದಿನ ಸಂಪೂರ್ಣ ವ್ಯಾಪಾರ-ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈಚೆಗೆ ಕೇಂದ್ರ ಸರಕಾರ ಆಹಾರ ಧಾನ್ಯಗಳು ಹಾಗೂ ಬೇಳೆಕಾಳು ವಹಿವಾಟು ಮೇಲೆ ತೆರಿಗೆ ವಿಧಿಸಿದ್ದು, ಇದರಿಂದ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಹಾಗೂ ವರ್ತಕರಿಗೆ ತೊಂದರೆಯಾಗಲಿದೆ.
ಜಿಎಸ್ಟಿ ಕೌನ್ಸಿಲ್ ಕೂಡಲೇ ತನ್ನ ಆದೇಶ ಹಿಂಪಡೆಯಬೇಕೆಂದು ರವಿವಾರ ಪೇಟೆ ವರ್ತಕರ ಸಂಘ ಒತ್ತಾಯಿಸಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ