ಬೆಳಗಾವಿ ಜಿಲ್ಲೆಯಲ್ಲಿ ಸಂಕ್ರಮಣದ ಸಂಕಟ ,ಕಿನಾಲ್ ಗೆ ಕಾರು ಬಿದ್ದು ಐವರ ಸಾವು
ಬೆಳಗಾವಿ- ಬೆಳಗಾವಿ ಜಿಲ್ಲೆಯ ಜನ ಬೆಳಗಿನ ಜಾವ ಸಂಕ್ರಮಣದ ಸಂಬ್ರಮದಲ್ಲಿ ಇರುವಾಗಲೇ ಶಾಕಿಂಗ್ ನ್ಯುಸ್ ಹೊರಬಿದ್ದಿದೆ ಸಂವದತ್ತಿ ತಾಲ್ಲೂಕಿನ ಮುರಗೋಡ ಪೋಲೀಸ್ ಠಾಣೆ ವ್ಯಾಪ್ತಿಯ ಕಡಬಿ ಶಿವಾಪೂರ ಬಳಿ ಕಾರು ಕಿನಾಲ್ ಗೆ ಬಿದ್ದು ಐವರು ಜನ ನೀರು ಪಾಲಾದ ದುರ್ಘಟನೆ ನಡೆದಿದೆ
ಸಂಕ್ರಮಣದ ದಿನ ಬೆಳಗಾವಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು ಐವರನ್ನು ಬಲಿ ಪಡೆದುಕೊಂಡಿದೆ
ಘಟಪ್ರಭಾ ಎಡದಂಡೆ ಕಾಲುವೆಗೆ ಕಾರು ಬಿದ್ದು, ಕಾರಿನಲ್ಲಿದ್ದ ಐದು ಜನ ದುರ್ಮರಣಕ್ಕೀಡಾಗಿದ್ದಾರೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಬಳಿಯ ಕಾಲುವೆಯಲ್ಲಿ ಈ ದುರಂತ ಸಂಭವಿಸಿದೆ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ, ವಾಪಸ್ಸಾಗುತ್ತಿದ್ದಾಗ ದುರ್ಘಟನೆ ನಡೆದಿದೆ
ಕಾರಿನ ಚಾಲಕ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಇದ್ದಾನೆ ಚಾಲಕ ಅಡಿವೇಪ್ಪ ಮಾಳಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ
ಒಂದೇ ಕುಟುಂಬದ ಐದು ಜನ ಕಾರಿನಲ್ಲೇ ಜಲಸಮಾಧಿ ಯಾಗಿದ್ದಾರೆ
ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60), ಲಗಮಣ್ಣ ಪೂಜೇರಿ(38), ಪಾರವ್ವ ಪೂಜೇರಿ(50), ಲಕ್ಷ್ಮೀ ಪೂಜೇರಿ(40) ಮೃತ ದುರ್ದೈವಿಗಳು.
ನಿನ್ನೆ ರಾತ್ರಿ ೧೦ ಗಂಟೆಗೆ ನಡೆದ ಘಟನೆ. ಮೂವರ ಶವ ಹೊರತೆಗೆದ ಅಗ್ನಿಶಾಮಕ ದಳ ಸಿಬ್ಬಂದಿ. ಮತ್ತಿಬ್ಬರಿಗಾಗಿ ಶೋಧ. ಕತ್ತಲಾಗಿದ್ದರಿಂದ ಕಾರ್ಯಚರಣೆ ಸ್ಥಗಿತಗೊಳಿಸಿ ಮುಂಜಾನೆ ಕಾರ್ಯಾಚರಣೆ ಆರಂಭಿಸಿರುವ ಅಗ್ನಿಶಾಮಕ ದಳ ಸಿಬ್ಬಂದಿಗಳು ಇನ್ನೆರಡು ಶವಗಳನ್ನು ಶೋಧಿಸುತ್ತಿದ್ದಾರೆ
ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60) ಮೃತ ದೇಹಗಳಿಗಾಗಿ ಶೋಧ ಮುಂದುವರೆದಿದೆ
ಸ್ಥಳದಲ್ಲೇ ಬೀಡು ಬಿಟ್ಟಿರುವ ಮುರಗೋಡ ಪೊಲೀಸರು ಕಾರ್ಯಾಚರಣೆಯ ಮೇಲೆ ನಿಗಾ ಇಟ್ಟಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ