Home / Breaking News / ಸಂಖ್ಯಾ ಬಲ ಇದ್ರೆ ವೇಟ್ ಯ್ಯಾಕೆ ಮಾಡ್ಬೇಕು? ಅತೃಪ್ತರಿಗೆ ಸತೀಶ್ ಜಾರಕಿಹೊಳಿ ಸವಾಲು

ಸಂಖ್ಯಾ ಬಲ ಇದ್ರೆ ವೇಟ್ ಯ್ಯಾಕೆ ಮಾಡ್ಬೇಕು? ಅತೃಪ್ತರಿಗೆ ಸತೀಶ್ ಜಾರಕಿಹೊಳಿ ಸವಾಲು

ಬೆಳಗಾವಿ- ಸರ್ಕಾರ ಅತಂತ್ರಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಕೆಲವು ಜನ ಅತೃಪ್ತರಿರುವದು ನಿಜ ಅವರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಮಾದ್ಯಮದವರು ಹದಿನಾರು ಜನ ಅತೃಪ್ತರಿದ್ದಾರೆ ಎಂದು ಹೇಳುತ್ತಿದ್ದಾರೆ ಇಷ್ಟೊಂದು ಸಂಖ್ಯಾಬಲ ಇದ್ದರೆ ಇವರು ವೇಟ್ ಮಾಡುತ್ತಿರುವದು ಯ್ಯಾಕೆ ? ಎಂದು ಸಚಿವ ಸತೀಶ್ ಜಾರಕಿಹೊಳಿ ಅತೃಪ್ತರಿಗೆ ಸವಾಲ್ ಹಾಕಿದ್ದಾರೆ

ಬೆಳಗಾವಿಯ ಅವರ ಗೃಹ ಕಚೇರಿಯಲ್ಲಿ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಮೂರ್ನಾಲ್ಕು ಜನ ಅತೃಪ್ತರಿರುವದು ನಿಜ ಅವರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವದಿಲ್ಲ ಅವರು ಈಗಲೂ ಪಕ್ಷಕ್ಕೆ ಮರಳಲು ಅವಕಾಶ ಇದೆ ಹಠ ಮುಂದುವರೆಸಿದರೆ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಆಪರೇಶನ್ ಕಮಲದ ಕಸರತ್ತು ವಿಫಲ ಆಗುವದು ಖಚಿತ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ

ಏಳು ತಿಂಗಳಿನಿಂದ ಇದು ನಡೆತುತ್ತಲೇ ಇದೆ ಅದಕ್ಕೆ ನಾವು ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದೇವೆ ಬಿಜೆಪಿ ಹತ್ತಿರ ಸರ್ಕಾರ ಪತನಗೊಳಿಸುವಷ್ಟು ಸಂಖ್ಯಾಬಲ ಇಲ್ಲ ಬಿಜೆಪಿಯವರಿಗೂ ಭಯ ಇದೆ ಅದಕ್ಕೆ ಅವರ ಶಾಸಕರನ್ನು ದೆಹಲಿಯಲ್ಲಿ ಇಟ್ಟಿದ್ದಾರೆ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ಮಾಡುತ್ತಿದೆ ಆದರೆ ಇದು ವಿಫಲವಾಗುತ್ತದೆ ರಾಜಕೀಯದಲ್ಲಿ ಗಾಳಕ್ಕೆ ಪ್ರತಿಗಾಳ ಇದ್ದೇ ಇರುತ್ತದೆ ಎಂದರು

ರಾಜ್ಯದಲ್ಲಿ ಸಮಸ್ಯೆ ಬಂದಾಗ ವೇಣುಗೋಪಾಲ್ ಬರುತ್ತಾರೆ ಸಮಸ್ಯೆ ಬಗೆ ಹರಿಸುತ್ತಾರೆ ಇವತ್ತು ವೇಣುಗೋಪಾಲ್ ಬೆಂಗಳೂರಿಗೆ ಬರುತ್ತಿರುವದು ಹೊಸದೇನಲ್ಲ ಇದು ರೂಟೀನ್ ನಾನೂ ಕೂಡಾ ಇವತ್ತು ಬೆಂಗಳೂರಿಗೆ ಹೊರಟಿದ್ದೇನೆ ವೇಣುಗೋಪಾಲ್ ಅವರನ್ನು ಭೇಟಿ ಆಗುತ್ತೇನೆ ಅವರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು

ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ಕರೆತರುವ ಪ್ರಯತ್ನವನ್ನು ಬಾಲಚಂದ್ರ ಮಾಡುತ್ತಿದ್ದಾರೆಯೇ? ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಬಾಲಚಂದ್ರ ಅವರು ಬಿಜೆಪಿಯಲ್ಲೇ ಇದ್ದಾರೆ ರಮೇಶ್ ಯಾರ ಮೂಲಕ ಬಿಜೆಪಿಗೆ ಹೋಗುತ್ತಿದ್ದಾರೆ ಎನ್ನುವದನ್ನು ಅವರಿಗೇ ಕೇಳಿ ಎಂದರು

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *