ಬೆಳಗಾವಿ: ಸತತ ಮಳೆ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನ ಶಿರೋಲಿ, ನಿಲಾವಡೆ, ಮೋಹಿಶೇತ್, ನಾಗರಗಾಳಿ, ಲೋಂಡಾ, ಗುಂಜಿ, ಹಲಗಾ, ಜಾಂಬೋಟಿ, ಬೈಲೂರು, ಕಣಕುಂಬಿ, ಬಿಜಗರ್ಣಿ, ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜು.15ರಂದು ರಜೆ ಘೋಷಿಸಿ ಖಾನಾಪುರ ಬಿಇಒ ಲಕ್ಷಣ ಯಕ್ಕುಂಡಿ ಗುರುವಾರ ಆದೇಶ ಹೊರಡಿಸಿದ್ದಾರೆ.
