ಬೆಳಗಾವಿ – ಚಾಲಕನ ನಿಯಂತ್ರಣ ತಪ್ಪಿ, ಟಿಪ್ಪರ್ ಹಾಯ್ದು ಬರೊಬ್ಬರಿ 54 ಕುರಿಗಳು ಬಲಿಯಾದ ಘಟನೆ ಹುಕ್ಕೇರಿ ತಾಲ್ಲೂಕಿನ ಅಮ್ಮನಗಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
ಖಡಿ ಸಾಗಿಸುತ್ತಿದ್ದ ಟಿಪ್ಪರ್ ವಾಹನ ಚಾಲಕನ ಹುಚ್ಚಾಟದಿಂದ 54 ಕುರಿಗಳ ಮಾರಣಹೋಮ ನಡೆದಿದೆ.ಸ್ಥಳದಲ್ಲೇ 54 ಕುರಿಗಳು ಸಾವನ್ನೊಪ್ಪಿದ್ದು,ಹಲವಾರು ಕುರಿಗಳು ಗಾಯಗೊಂಡಿವೆ.ಅಮ್ಮನಗಿ- ಮುಗಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಈ ಅಪಘಾತ ಸಂಭವಿಸಿದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ