ನವದೆಹಲಿ- 100 ಕೋಟಿ ಕೊಟ್ಟರೆ ಗವರ್ನರ್ ಮಾಡ್ತೀವಿ,ರಾಜ್ಯಸಭೆಯ ಮೆಂಬರ್ ಮಾಡ್ತೀವಿ ಅಂತಾ ಹಲವಾರು ಜನ ವಿಐಪಿಗಳಿಗೆ ನಂಬಿಸಿ ಕೋಟಿ,ಕೋಟಿ ಲೂಟಿ ಮಾಡಲು ಯತ್ನಿಸಿದ ಖತರ್ನಾಕ್ ಗ್ಯಾಂಗ್ ಸಿಬಿಐ ಬಲೆಗೆ ಬಿದ್ದಿದೆ.
ವಂಚಕರನ್ನು ಅರೆಸ್ಟ್ ಮಾಡಲು ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಓರ್ವ ಆರೋಪಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದು,ಬೆಳಗಾವಿಯ ರವೀಂದ್ರ ನಾಯಕ್ ಸೇರಿದಂತೆ ಒಟ್ಟು ನಾಲ್ಕು ಜನ ವಂಚಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಕರ್ನಾಟಕ ಬೆಳಗಾವಿಯ ರವೀಂದ್ರ ವಿಠ್ಠಲ ನಾಯಕ್,ಮಹಾರಾಷ್ಟ್ರ ಲಾತೂರಿನ ಕಮಲಾಕರ್ ಪ್ರೇಮಕುಮಾರ್ ಬಂಡಗರ್,ದೆಹಲಿಯ ಮಹೇಂದ್ರಪಾಲ್,ಅಭಿಷೇಕ ಬೂರಾ ಮತ್ತು ಮಹ್ಮದ ಎಜಾಜ್ ಖಾನ್ ಇವರನ್ನು ಬಂಧಿಸಲಾಗಿದೆ.
ದೊಡ್ಡ ದೊಡ್ಡ ರಾಜಕೀಯ ನಾಯಕರನ್ನು ಸಂಪರ್ಕಿಸಿ,100 ಕೋಟಿ ಕೊಟ್ಟರೆ ರಾಜ್ಯಪಾಲರ ಹುದ್ದೆ,ರಾಜ್ಯಸಭಾ ಸದಸ್ಯ ಸ್ಥಾನ ಕೊಡಸ್ತೀವಿ ಅಂತಾ ನಂಬಿಸಿ,ಕೋಟಿ ಕೋಟಿ ಲೂಟಿ ಮಾಡುವ ಯತ್ನ ನಡೆಸಿದ್ದ ಈ ಗ್ಯಾಂಗ್ ಈಗ ಸಿಬಿಐ ಬಲೆಗೆ ಬಿದ್ದಿದೆ.ಬಂಧಿತ ನಾಲ್ವರು ಆರೋಪಿಗಳಲ್ಲಿ ಬೆಳಗಾವಿಯ ರವೀಂದ್ರ ವಿಠ್ಠಲ ನಾಯಕ್ ಸೇರಿದ್ದಾನೆ.