*ಡಿಸೆಂಬರ್ ನಲ್ಲಿ ಬೀದರ್ ನಲ್ಲಿ ಅಗ್ನಿಪಥ್ ರ್ಯಾಲಿ, ಅಭ್ಯರ್ಥಿಗಳ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ*
*ಬೆಳಗಾವಿ:-* ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಈ ಕುರಿತು ಅಧಿಕೃತವಾಗಿ ಸೇನಾ ನೇಮಕಾತಿ ಅಧಿಸೂಚನೆ ಹೊರಡಿಸಿ ಅಗ್ನಿಪಥ್ ಯೋಜನೆಗಾಗಿ ಅಭ್ಯರ್ಥಿಗಳಿಗಾಗಿ ನೇಮಕಾತಿ ರ್ಯಾಲಿ ನಡೆಸುವುದಾಗಿ ಪ್ರಕಟಣೆ ಹೊರಡಿಸಿದೆ.
ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ,ಬೀದರ,ಕಲಬುರ್ಗಿ ಕೊಪ್ಪಳ,ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಪುರುಷ ಅಭ್ಯರ್ಥಿಗಳಿಗಾಗಿ ಮೊದಲ ಹಂತದ ನೇಮಕಾತಿ ರ್ಯಾಲಿ ನಡೆಯಲಿದೆ. ಬೆಂಗಳೂರಿನ ಹೆಡ್ ಕ್ವಾರ್ಟರ್ ರಿಕ್ರೂಟಿಂಗ್ ಝೋನ್ ಆಶ್ರಯದಲ್ಲಿ ಇದೇ ಬರುವ ಡಿಸೆಂಬರ್ 05 ರಿಂದ 22ರ ವರೆಗೆ ಬೀದರ್ ಜಿಲ್ಲೆಯಲ್ಲಿರುವ ನೆಹರು ಮೈದಾನದಲ್ಲಿ ಅಗ್ನಿಪಥ್ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಸೇನೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಸರ್ಕಾರ ಅಗ್ನಿವೀರ್ ಜನರಲ್ ಡ್ಯೂಟಿ,ಅಗ್ನಿವೀರ್ ಟೆಕ್ನಿಕಲ್,ಅಗ್ನಿವೀರ್ ಟ್ರೇಡ್ಸ್ ಮ್ಯಾನ್ 10ನೇ ತರಗತಿ ತೇರ್ಗಡೆ,ಅಗ್ನಿವೀರ್ ಟ್ರೇಡ್ಸ್ ಮ್ಯಾನ್ 8ನೇ ತರಗತಿ,ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಸೇರಿದಂತೆ ಟೆಕ್ನಿಕಲ್ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.
ಈ ನೇಮಕಾತಿಯ ವಯಸ್ಸು, ಶಿಕ್ಷಣ ವಿವಿಧ ವಿಭಾಗಗಳ ನಿಗದಿತ ಮಾನದಂಡಗಳ ಸಂಪೂರ್ಣ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ ಅಲ್ಲದೆ ಈ ಮಾಹಿತಿಯನ್ನು
ಬೆಳಗಾವಿಯ ಸೇನಾ ಕಚೇರಿ ಜುಲೈ 30ರಂದು ಪ್ರಕಟಿಸಲಿದೆ.
ನೇಮಕಾತಿಯ ಆನ್ಲೈನ್ ನೊಂದಣಿ ಪ್ರಕ್ರಿಯೆ ಆಗಸ್ಟ್ 5-2022 ರಿಂದ 03 ಸೆಪ್ಟೆಂಬರ್ 2022ರ ವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ http://Joinindianarmy.nic.in ವೆಬ್ ಸೈಟ್ ನಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬಹುದಾಗಿದೆ.
ನೊಂದಾಯಿತ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ನವೆಂಬರ್ 10ರಿಂದ ನವೆಂಬರ್ 20ರ ವರೆಗೆ ನೊಂದಾಯಿತ ಅಭ್ಯರ್ಥಿಗಳ ಇಮೇಲ್ ಗೆ ಕಳುಹಿಸಲಾಗುತ್ತದೆ.