ಬೆಳಗಾವಿ- ಕಬ್ಬಿನ ಗದ್ದೆಯಲ್ಲಿ ಗೊಂಜಾಳ ಬೆಳೆದು ಲಾಭ ಮಾಡಿಕೊಳ್ಳುವ ರೈತರನ್ನು ನಾವು ನೋಡಿದ್ದೇವೆ.ಆದ್ರೆ ಈಗ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದವರು ಈಗ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ರಾಯಬಾಗ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬೊಮ್ಮನಾಳ ಮತ್ತು,ಬಿರನಾಳ ಗ್ರಾಮದಲ್ಲಿ ಕಬ್ನಿನ ಗದ್ದೆಯಲ್ಲಿ ಗಾಂಜಾ ಬೆಳೆದಿರುವದನ್ನು ರಾಯಬಾಗ ಠಾಣೆಯ ಪೋಲೀಸರು ಪತ್ತೆ ಮಾಡಿದ್ದಾರೆ.ಎರಡೂ ಗ್ರಾಮಗಳಲ್ಲಿ ಸುಮಾರು 9.5 ಕೆಜಿ ಗಾಂಜಾ ವಶಪಡಿಸಿಕೊಂಡಿರುವ ಪೋಲೀಸರು ಎರಡು ಪತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ,ಅದರಲ್ಲೂ ಬೆಳಗಾವಿ ಮಹಾನಗರದಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಗಾಂಜಾ ಬೆಳೆಯ ಮೂಲ ಹುಡುಕಿ,ಗಾಂಜಾ ಮಾರಾಟಗಾರರಿಗೆ ಬಲೆ ಬೀಸಲು ಪೋಲೀಸರು ವಿವಿಧ ತಂಡ ರಚಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಬೆಳಗಾವಿ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿ ಮಾಡುವದು ಅತ್ಯಗತ್ಯವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ